ಆಗಸ್ಟ್, ಸೆಪ್ಟೆಂಬರ್ ನಲ್ಲಿ ಮೋಡ ಬಿತ್ತನೆ ಆರಂಭ
ಬೆಂಗಳೂರು : ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಮಳೆ ಕೊರತೆ ಆಗಿರುವ ಕಡೆ ಮೋಡ ಬಿತ್ತನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್ ಹೇಳಿದರು. ಬೆಂಗಳೂರು, ಗದಗ, ಮತ್ತು ಸುರಪುರದಲ್ಲಿ ರೆಡಾರ್ ಗಳನ್ನು ಸ್ಥಾಪಿಸಲಾಗುವುದು. ಮೋಡ ಬಿತ್ತನೆ ಗಾಗಿ ವಿಶೇಷ ತಂತ್ರಜ್ಞಾನ ಹೊಂದಿರುವ ಎರಡು ವಿಮಾನಗಳುಬರಲಿವೆ ಎಂದು ಅವರು ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ವಿವರಿಸಿದರು.
ಆಗಸ್ಟ್ ಮೊದಲ ವಾರದಿಂದ ಮೋಡ ಬಿತ್ತನೆ ಆರಂಭವಾಗುತ್ತದೆ.. ಎಲ್ಲೆಲ್ಲಿ ದಟ್ಟ ಮೋಡಗಳು ಇರುತ್ತವೋ ಅಲ್ಲಿ ವಿಮಾನಗಳು ಸಂಚರಿಸಿ ರಾಸಾಯನಿಕ ಸಿಂಪಡಿಸುತ್ತವೆ. ಇದು ಮಳೆ ಬರಿಸುವ ಸಾಮರ್ಥ್ಯ ಇರುವ ಮೋಡಗಳನ್ನು ಪ್ರೇರೆಪಿಸಿ ಶೇ.10ರಿಂದ 15ರಷ್ಠು ಮಳೆಯ ಪ್ರಮಾಣ ಹೆಚ್ಚಿಸುತ್ತದೆ. ಮೋಡ ಬಿತ್ತನೆ ಪೂರ್ಣಗೊಂಡ 30 ನಿಮಿಷಗಳೊಳಗೆ ಅದರ ಫಲಿತಾಂಶ ತಿಳಿಯಲಿದೆ ಎಂದು ಅವರು ವಿವರಿಸಿದರು. ಕಾವೇರಿ, ಮಲಪ್ರಭಾ, ತುಂಗಭದ್ರಾ ಕಣಿವೆಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ ಎಂದರು.
Comments