ಬಿಸಿಲಿನ ಬೇಗೆಗೆ ಜನರು ತತ್ತರ

ಬಿಹಾರ: ಬಿಹಾರ ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. 24 ಗಂಟೆಗಳಲ್ಲಿ ಅತ್ಯಧಿಕ ಪ್ರಮಾಣದ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಹಾರದ ರಾಜಧಾನಿ ಪಾಟ್ನಾ ದಲ್ಲಿರುವ ಸುತ್ತ ಮುತ್ತಲು ಪ್ರದೇಶಗಳಲ್ಲಿ ಮುಂಜಾನೆ ಭಾರೀ ಬಿಸಿಲು ಇದ್ದು, ಮತ್ತೆ 24 ಗಂಟೆಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ ಕಾರಣ ಮನೆಯಿಂದ ಹೊರಗೆ ಓಡಾಡಲು ಜನ ಭಯಪಡುವ ವಾತಾವರಣ ಇದೆ. ಇನ್ನು ಬಿಹಾರದಲ್ಲಿ ಮಳೆಗಾಗಿ ಜನರು ಕಾಯುತ್ತಿದ್ದು, ಮಳೆ ಬರಬೇಕಾದರೆ ಇನ್ನು ಮೂರು ದಿನಗಳ ಕಾಲ ಕಾಯಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಸಿಲಿನ ಬೇಗೆ ನಿಗಿಸಿಕೊಳ್ಳಲು ಪಾಟ್ನಾ ಜನರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಜ್ಯೂಸ್ ಅಂಗಡಿಗಳಲ್ಲಿ ಜನ ಸಾಲು ಗಟ್ಟಿ ನಿಂತಿರುವುದು ಕಂಡು ಬಂದಿದೆ. ಪಾಟ್ನಾದಲ್ಲಿ ಅತ್ಯಧಿಕ ತಾಪಮಾನ 28.5 ಡಿಗ್ರಿ, ಭಾಗಲ್ಪುರ್ 26.8 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಇದ್ದರೆ, ಇನ್ನು ಮಂಗಳವಾರದಂದು 37.4 ಅತ್ಯಧಿಕ ತಾಪಮಾನ ದಾಖಲಾಗಿತ್ತು. ಹಾಗೇ ಗಯಾದಲ್ಲಿ 36.7 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿದೆ.
Comments