ವೃತ್ತಿಯಲ್ಲಿ ಕಳ್ಳನಾದ್ರು, ಯುವಕ ಮಾಡಿದ್ದು ಈ ಕೆಲಸ?
ನವದೆಹಲಿ: ಜಗತ್ತಿನಲ್ಲಿ ಸಕಲ ಸೌಲಭ್ಯ ದೊರೆತರು ಕೆಲವರು ಸಹಾಯ ಮಾಡಲು ಮುಂದೆ ಬರುವುದಿಲ್ಲ, ಮತ್ತೆ ಕೆಲವರು ಹೊಟ್ಟೆಪಾಡಿಗಾಗಿ ಜೀವನ ಸಾಗಿಸಲು ಅಡ್ಡದಾರಿ ಹಿಡಿಯುತ್ತಾರೆ. ಆದ್ರೆ ನಿಮಗೆ ಗೊತ್ತಾ, ನಮ್ಮ ನಿಮ್ಮಲ್ಲರ ಮಧ್ಯೆ ಸಮಾಜಕ್ಕಾಗಿ ಇನ್ನೇನು ಮಾಡಬೇಕು ತುಡಿತವಿರುವ ಜನರೂ ಕೂಡಾ ಇದ್ದಾರೆ, ಆದ್ರೆ ಈ ಸ್ಟೋರಿ ಹೇಳುತ್ತಿರುವುದು ಸ್ವಲ್ಪ ವಿಚಿತ್ರ ಅಂತ ಅನ್ನಿಸಿದ್ರು ಸತ್ಯ.
ಇಲ್ಲೊಬ್ಬ ಯುವಕ ವೃತ್ತಿಯಲ್ಲಿ ಕಳ್ಳನಾದ್ರು ಬಡವರಿಗೆ, ದುರ್ಬಲ ವರ್ಗದವರಿಗೆ ಸಹಾಯ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಯುವಕನ ಹೆಸರು ಇರ್ಫಾನ್, ವಯಸ್ಸು ೨೭, ದೆಹಲಿ ಮೂಲದ ಶ್ರೀಮಂತರ ಮನೆಯಲ್ಲಿ ಕಳ್ಳತನ ಮಾಡಿ ಕಾರ್ಯವೆಸಗುವ ಈತ ಬಿಹಾರದಲ್ಲಿರುವ ತನ್ನ ಗ್ರಾಮದಲ್ಲಿ ಎಂಟು ಕುಟುಂಬಗಳ ವಿವಾಹಕ್ಕಾಗಿ ಧನ ಸಹಾಯ ಮಾಡಿದ್ದಾರೆ.
5ನೇ ಕ್ಲಾಸಿನವರೆಗೆ ಮಾತ್ರ ಓದಿರುವ ಇವರು ದೆಹಲಿಯಲ್ಲಿ ೧೨ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.ಇವರ ಹತ್ತಿರ ಐಷಾರಾಮಿ ಕಾರುಗಳಿವೆ. ಜುಲೈ 6ರಂದು ದೆಹಲಿ ಮೂಲದ ಪೊಲೀಸರು ಈತನನ್ನು ಬಂಧಿಸಿದಾಗ ಈತನ ಕೈಯಲ್ಲಿ ರೋಲೆಕ್ಸ್ ವಾಚ್ ಇತ್ತು. ಅದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ಬಂಗಲೆಯೊಂದರ ಕದ್ದದ್ದಾಗಿತ್ತು. ಕೆಲವು ತಿಂಗಳ ಹಿಂದೆಯಷ್ಟೇ ಈತ ಬೆಲೆ ಬಾಳುವ ವಾಚ್ ಮತ್ತು ಆಭರಣಗಳನ್ನು ಮಾರಿ ಹೋಂಡಾ ಸಿವಿಕ್ ಕಾರು ಖರೀದಿಸಿದ್ದ. ಈತನಿಂದ ವಾಚ್ ಖರೀದಿ ಮಾಡಿದ್ದ ಅಂಗಡಿಯ ಮಾಲೀಕ ಧರ್ಮೆಂದರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇರ್ಫಾನ್ ಅವರನ್ನು ಪೊಲೀಸರು ಬಿಹಾರದ ಪುರಿ ಜಿಲ್ಲೆಯಿಂದ ಬಂಧಿಸಿದಾಗ ಅಲ್ಲಿನ ಜನರು ಈತ ಸಾಮಾಜಿಕ ಕಾರ್ಯಕರ್ತ. ಬಡವರಿಗಾಗಿ ಆರೋಗ್ಯ ಶಿಬಿರ ಆಯೋಜಿಸುತ್ತಾರೆ ಎಂದು ಹೇಳಿದ್ದನ್ನು ಕೇಳಿ ಪೊಲೀಸರು ದಂಗಾಗಿ ಹೋಗಿದ್ದಾರೆ. ಆ ಗ್ರಾಮದಲ್ಲಿ ಇರ್ಫಾನ್ ಉಜಾಲಾ ಬಾಬು ಎಂದೇ ಕರೆಯಲ್ಪಡುತ್ತಾರೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಇರ್ಫಾನ್ ತನ್ನ ಗ್ರಾಮದವರಿಗೆ ಮಾತ್ರ ಅಲ್ಲ ತನ್ನ ಪ್ರೇಯಸಿಗೂ ಸುಳ್ಳು ಹೇಳಿದ್ದನು. ಬೋಜ್ ಪುರಿ ಸಿನಿಮಾ ನಟಿ ಈತನ ಪ್ರೇಯಸಿ, ನಾಲ್ಕು ವರ್ಷ ಗಳ ಹಿಂದೆ ಕೆಲಸ ಹುಡುಕುತ್ತಾ ದೆಹಲಿಗೆ ಬಂದ ಈತ ಗಾರ್ಮೆಂಟ್ಸ್ ವ್ಯವಹಾರ ಆರಂಭಿಸಿದ್ದರು ಅದು ಯಶಸ್ವಿಯಾಗಿರಲಿಲ್ಲ.
Comments