ಗೋವು ದತ್ತು ಪಡೆದ ನಿರ್ಮಾಪಕ ಸರೋಶ್ ಖಾನ್
ಮುಂಬೈ: ಗೋ ರಕ್ಷಣೆ ಹೆಸರಿನಲ್ಲಿ ದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವ ಹೊತ್ತಲ್ಲೇ ಶಾಂತಿ ಸಂದೇಶ ಸಾರುವುದಾಗಿ ಸಿನಿಮಾ ನಿರ್ಮಾಪಕ ಸರೋಶ್ ಖಾನ್ ಗೋಗಳನ್ನು ದತ್ತು ಪಡೆದಿದ್ದಾರೆ ಎಂದು ಹಿಂದೂಸ್ತಾನ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಮುಂಬೈನಲ್ಲಿ ವಾಸವಿರುವ ಕೋಟಾ ನಿವಾಸಿ ಸರೋಶ್ ಖಾನ್ ಭಾನುವಾರ ಹಸು ಮತ್ತು ಕರುವೊಂದನ್ನು ದತ್ತು ಪಡೆದು, ಗೃಹ ಪ್ರವೇಶ ಕಾರ್ಯ ನೆರವೇರಿಸಿದ್ದಾರೆ.
ವಿಗ್ಯಾನ್ ನಗರದಲ್ಲಿರುವ ತಮ್ಮ ಮನೆಗೆ ಹಸುಗಳನ್ನು ಕರೆತಂದ ಸರೋಶ್ ಖಾನ್ ಹಸುಗಳಿಗೆ ಕುಂಕುಮ ಹಚ್ಚಿ ಸ್ವಾಗತಿಸಿದ್ದಾರೆ. ಗೋ ರಕ್ಷಣೆ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಕೊನೆಗೊಳಿಸಿ ಶಾಂತಿ ಸಮಾಧಾನ ದ ಸಂದೇಶ ಸಾರುವುದು ನನ್ನ ಉದ್ದೇಶ, ಇಸ್ಲಾಂ ಧರ್ಮ ಇನ್ನಿತರ ಧರ್ಮವನ್ನು ದ್ವೇಷಿಸುವುದಿಲ್ಲ. ಪ್ರತಿಯೊಬ್ಬರು ಪರಸ್ಪರ ಗೌರವಿಸುವುದನ್ನು ಕಲಿಯಬೇಕು ಮತ್ತು ಗೋವುಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಬೇಕು ಎಂದು ಖಾನ್ ಹೇಳಿದ್ದಾರೆ.
Comments