ಜುಲೈ 28ರಿಂದ ಮೈಸೂರು-ಬೆಂಗಳೂರು ಕೆಎಸ್ ಆರ್ ರೈಲಿನ ಪ್ರಯಾಣ ದರ ಹೆಚ್ಚಳ,
ಮೈಸೂರು: ಮೈಸೂರು- ಕೆಎಸ್ ಆರ್ ಬೆಂಗಳೂರು ಸಿಟಿ ಪ್ಯಾಸೆಂಜರ್ ರೈಲನ್ನು ಜುಲೈ 28ರಿಂದ ಎಕ್ಸ್ ಪ್ರೆಸ್ ಆಗಿ ಪರಿವರ್ತನೆ ಮಾಡಲು ನೈಖುತ್ಯ ರೈಲ್ವೇ ಇಲಾಖೆ ನಿರ್ಧರಿಸಿದೆ. ಮೈಸೂರು - ಬೆಂಗಳೂರು ನಡುವೆ ಪ್ರಯಾಣ ದರ ದುಪ್ಪಟ್ಟಾಗಲಿದೆ. ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
ನೈಖುತ್ಯ ರೈಲ್ವೆಯ ಬೋಗಿಗಳನ್ನು ತೆರವುಗೊಳಿಸದೆ, ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ಮಾಡದೆ ಈ ರೈಲನ್ನು ಓಡಿಸಲಿದೆ. ಇದರಿಂದಾಗಿ
ಬೆಂಗಳೂರಿನಿಂದ ಮೈಸೂರಿಗೆ ೩೦ ರ ದರದಲ್ಲಿಪ್ರಯಾಣಿಸುತ್ತಿದ್ದವರು ದುಪ್ಪಟ್ಟ ದರ ತೆರಬೇಕಾಗಿದೆ. ಬೆಂಗಳೂರಿನಿಂದ ಕೆಂಗೇರಿಗೆ 10
ನೀಡಿ ಪ್ರಯಾಣಿಸುತ್ತಿದ್ದವರು ಮುಂದೆ 30 ರೂ ನೀಡಬೇಕಾಗಿದೆ. ಪ್ರಯಾಣಿಕರಿಗೆ ತೊಂದರೆ ಯಾಗಲಿದೆ ಎಂದು ಕರ್ನಾಟಕ ರೈಲ್ವೆ ವೇದಿಕೆಯ
ಕೆ.ಎನ್ ಕೃಷ್ಣಪ್ರಸಾದ್ ಹೇಳಿದ್ದಾರೆ.
Comments