ವಿಶ್ವದ ಮೊದಲ ಕಿರಿಯ ವಯಸ್ಸಿನ ಲೇಡಿ ಕಮಾಂಡರ್
ನವದೆಹಲಿ: ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಆನಿ ದಿವ್ಯಾ ಪಾತ್ರರಾಗಿದ್ದಾರೆ. ದೈತ್ಯ ವಿಮಾನ ಬೋಯಿಂಗ್ 777 ಚಾಲನೆಗೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಪೈಲೆಟ್ ನೇಮಕಗೊಂಡಿದ್ದು, ಇವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.
ನಾನು ಮೊದಲಿಗೆ ಪೈಲೆಟ್ ಆಗುತ್ತೇನೆ ಎಂದು ಹೇಳಿದ್ದೆ, ಈ ವೇಳೆ ಹೆಚ್ಚಿನವರು ಇದನ್ನು ವಿರೋಧಿಸಿದ್ದರು. ಅಲ್ಲದೇ ವಿಜಯವಾಡದಲ್ಲಿ ಪೈಲಟ್ ಕೋಚಿಂಗ್ ಕೂಡಾ ಸಿಗುತ್ತಿರಲಿಲ್ಲ. ಆದರೆ ತಂದೆ ತಾಯಿ ನನ್ನ ಮೇಲೆ ಇರಿಸಿದ್ದ ಭರವಸೆಯೇ ನನ್ನ ಪೈಲಟ್ ಕೋಚಿಂಗ್ ಕೂಡಾ ಸಿಗುತ್ತಿರಲಿಲ್ಲ. ಆದರೆ ತಂದೆ -ತಾಯಿ ನನ್ನ ಮೇಲೆ ಇರಿಸಿದ್ದ ಭರವಸೆಯೇ ನನ್ನನ್ನು ಇಲ್ಲಿಯವರೆಗೆ ತಲುಪಿಸಿದೆ ಎಂದು ತಮ್ಮ ಪೈಲಟ್ ಜೀವನದ ದಿನಗಳನ್ನು ನೆನೆಪಿಸುತ್ತಾ ದಿವ್ಯಾ ಹೇಳಿದ್ದಾರೆ.
ಪಠಾಣ್ ಕೋಟ್ ಮೂಲದವರಾದ ದಿವ್ಯಾ ಸಣ್ಣ ವಯಸ್ಸಿನಲ್ಲೇ ಆಂಧ್ರಪ್ರದೇಶ ವಿಡಯವಾಡಗೆ ಬಂದಿದ್ದರು, ತೆಲುಗಿನಲ್ಲಿ ಸುಲಲಿತವಾಗಿ ಮಾತನಾಡುವ ಅವರಿಗೆ ಆರ್ಥಿಕ ಸಮಸ್ಯೆ ಹಾಗೂ ಇತರ ಸಮಸ್ಯೆಗಳಿದ್ದರು ಇವೆಲ್ಲವನ್ನು ಮೀರಿ ಸಾಧನೆ ಮಾಡಿದ್ದಾರೆ. ಪೈಲೆಟ್ ಕೋಚಿಂಗ್ ವೇಳೆ ಹೆಚ್ಚಿನ ಶುಲ್ಕ ನೀಡಬೇಕಾಗಿತ್ತು. ನನ್ನ ಪೋಷಕರಿಗೆ ಒಂದು ದಿನ ನಾನು ಹಾರುತ್ತೇನೆ ಎಂಬುದು ತಿಳಿದಿತ್ತು. ಹೀಗಾಗಿ ನನ್ನ ಕನಸಿನ ರೂಪಕೊಟ್ಟಿದ್ದಾರೆ ಎಂದು ದಿವ್ಯಾ ಹೇಳಿಕೊಂಡಿದ್ದಾರೆ.
Comments