ಅಮೆರಿಕಾಗೆ ಚಿಂತೆ?

ನ್ಯೂಯಾರ್ಕ್: ಮುಂದಿನ ತಿಂಗಳು ಆಗಸ್ಟ್ 21ರಂದು 38 ವರ್ಷಗಳ ಬಳಿಕೆ ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು, ಇದು ಅಮೆರಿಕಾದ ಒರೆಗಾನ್ ನಿಂದ ದಕ್ಷಿಣ ಕ್ಯಾಥೋಲಿನಾ ವರೆಗಿನ ೭೦ ಮೈಲು ಅಗಲದ ಭೂಪಟ್ಟಿಯಲ್ಲಿ ಕಾಣಸಿಗಲಿದೆ.
ಅಮೆರಿಕಾದ ಕಂಡು ಬರುವ ಈ ದೀರ್ಘಾವಧಿಯ ಸಂಪೂರ್ಣ ಸೂರ್ಯಗ್ರಹಣ ದಿಂದಾಗಿ ಸೂರ್ಯಶಕ್ತಿಯನ್ನು ತನ್ನ ವಿದ್ಯುತ್ ಅಗತ್ಯಕ್ಕೆ ಬಹುವಾಗಿ ಅವಲಂಬಿಸಿರುವ ಅಮೆರಿಕಾಕ್ಕೆ ಈಗ ಚಿಂತೆ ಉಂಟಾಗಿದೆ.
ಅಮೆರಿಕಾದ 9,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳು ಈ ಖಗ್ರಾಸ ಸೂರ್ಯ ಗ್ರಹಣದಿಂದ ಮಂಕಾಗಲಿವೆ. ಹಾಗಾಗಿ
ಅಂದು ಸೌರ ವಿದ್ಯುತ್ ಉತ್ಪಾದನೆ ಬಹುತೇಕ ಸ್ಥಗಿತಗೊಳ್ಳಲಿದೆ. ವಾಷಿಂಗ್ ಟನ್ ಪೋಸ್ಟ್ ವರದಿಯ ಪ್ರಕಾರ ಒಂದು
ಶತಮಾನದ ಬಳಿಕ ಈ ಸಂಪೂರ್ಣ ಸೂರ್ಯ ಗ್ರಹಣವು ಅಮೆರಿಕಾದಲ್ಲಿ ಒಂದು ಅಂಚಿನ ಕರಾವಳಿಯಿಂದ ಇನ್ನೊಂದು ಅಂಚಿನ ಕರಾವಳಿಯನ್ನು
ಒಳಗೊಳ್ಳುತ್ತದೆ. ಅಮೆರಿಕಾದ ಸೌರಶಕ್ತಿ ವಿದ್ಯುತ್ ಅವಲಂಬನೆಯು ಈಚಿನ ವರ್ಷಗಳಲ್ಲಿ ಒಂಬತ್ತು ಪಟ್ಟು ಹೆಚ್ಚಿರುವುದರಿಂದ
ಈ ಸೂರ್ಯಗ್ರಹಣವು ಅಮೆರಿಕಾದಲ್ಲಿ ಒಂದು ಅಂಚಿನ ಕರಾವಳಿಯಿಂದ ಇನ್ನೊಂದು ಅಂಚಿನ ಕರಾವಳಿಯನ್ನು ಒಳಗೊಳ್ಳುತ್ತದೆ.
Comments