ಸಸ್ಯಕಾಶಿಯಲ್ಲಿ ಮಲೆನಾಡಿನ (ಶಿವಮೊಗ್ಗ) ಸೊಬಗು
ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಈ ಬಾರಿಯೂ ಸ್ವಾತಂತ್ರ್ಯೋತ್ಸವಕ್ಕೆ ಪುಷ್ಪಗಳಲ್ಲಿ ಮಲೆನಾಡಿನ ಸೊಬಗು ಗಮನ ಸೆಳೆಯಲಿದೆ.
1967 ರಲ್ಲಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗಾಗಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು, ಅದರ ಸುವರ್ಣ ಮಹೋತ್ಸವದ ನೆನಪಿನಲ್ಲಿ ಕುವೆಂಪು ಮಲೆನಾಡನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನಕಲಾ ಸಂಘ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಪ್ರತಿಷ್ಠಾನ ಜೊತೆಯಾಗಿ ಇದನ್ನು ಸಿದ್ಧಗೊಳಿಸಿತ್ತು.
ಮಹಾಕವಿ ಕುವೆಂಪು ಜನ್ಮಸ್ಥಾನ ಶಿವಮೊಗ್ಗ ಜಿಲ್ಲೆಯ ತೀರ್ಥಹ್ಳಳ್ಳಿ ತಾಲೂಕಿನ ಕುಪ್ಪಳಿಯ ಮನೆ ಅವರ ಬರಹಕ್ಕೆ ಸ್ಫೂರ್ತಿಯಾದ ಕವಿಶೈಲ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆಗಳು.ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಗದೀಶ್ ಜಗತ್ಪ್ರಸಿದ್ಧ ಜೋಗ ಜಲಪಾತದ ಮಾದರಿಯನ್ನು ನಾವು ರೂಪಿಸುತ್ತಿದ್ದೇವೆ. ಜೋಗ ಜಲಪಾತದ ಕುರಿತು ಕುವೆಂಪು ಅವರು ಬರೆದ ಸಾಲುಗಳನ್ನು ಹಾಕುತ್ತೇವೆ ಈ ಮೂಲಕ ಲಾಲ್ ಬಾಗ್ ನಲ್ಲಿ ಪುಟ್ಟ ಮಲೆನಾಡನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
Comments