ಅಬ್ದುಲ್ ಕಲಾಂ ಕಲಾ ಮ್ಯೂಸಿಯಂ ನಾಳೆ ಆರಂಭ

ತಿರುವನಂತಪುರಂ: ಮಾಜಿ ರಾಷ್ಟ್ರಪತಿ , ಬಾಹ್ಯಕಾಶ ವಿಜ್ಞಾನಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ನೆನಪಿಗಾಗಿ ಇದೇ ತಿಂಗಳ ೧೩ರಂದು ತಿರುವನಂತಪುರಂನಲ್ಲಿ ಮ್ಯೂಸಿಯಂ ಆರಂಭಗೊಳ್ಳಲಿದೆ. ಡಾ.ಕಲಾಂ ಸ್ಮತಿ ಅಂತರಾಷ್ಟ್ರೀಯ ವಿಜ್ಞಾನ ಮತ್ತು ಬಾಹ್ಯಕಾಶ ಮ್ಯೂಸಿಯಂ ಎಂಬ ಹೆಸರಿಡಲಾಗಿದೆ. ದಕ್ಷಿಣ ಭಾರತದಲ್ಲೇ ಇದು ಮೊದಲನೆಯದ್ದಾಗಿದೆ.
ಯುವಕರನ್ನು ಆಕರ್ಷಿಸಲು ದಿವಂಗತ ರಾಷ್ಟ್ರಪತಿಗಳ ನೆನಪು, ಛಾಯಾಚಿತ್ರಗಳು ಹಾಗೂ ರಾಕೆಟ್ ಮಾದರಿಗಳು, ಉಪಗ್ರಹಗಳು ಮತ್ತು ಪ್ರಸಿದ್ಧ ಉಲ್ಲೇಖಗಳ ಸಾಲುಗಳನ್ನು ಮ್ಯೂಸಿಯಂ ನಲ್ಲಿ ಇಡಲಾಗಿದೆ. ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ ರಾಧಾಕೃಷ್ಣನ್ ಅವರು ಮ್ಯೂಸಿಯಂ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಸ್ಥೆಯ ನಿರ್ದೇಶಕ ಕೆ.ಶಿವನ್ ಮತ್ತ ಕೇರಳ ವಿಧಾನಸಭೆಯ ಉಪಸ್ಪೀಕರ್ ವಿ.ಸಸಿ ಪಾಲ್ಗೊಳ್ಳಲಿದ್ದಾರೆ.
Comments