ಸಿರಿಯಾದಿಂದ ಮರಳುತ್ತಿದ್ದ ಶಂಕಿತ ವ್ಯಕ್ತಿ ಬಂಧನ

12 Jul 2017 1:40 PM | General
553 Report

ಐಸಿಸ್ ಜೊತೆ ನಂಟು ಹೊಂದಿರುವ ಅನುಮಾನದ ಮೇಲೆ  ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ

ನವದೆಹಲಿ: ಸಿರಿಯಾ ದಿಂದ ಮರಳುತಿದ್ದ ಶಂಕಿತ ವ್ಯಕ್ತಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿ  ಷಹಜಹಾ  ಕ್ಯಾಂಡಿ ಎಂದು ಗುರುತಿಸಲಾಗಿದ್ದು, ಐಸಿಸ್ ಜೊತೆ ನಂಟು ಹೊಂದಿರುವ ಅನುಮಾನದ ಮೇಲೆ  ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಮೂಲಗಳ ಪ್ರಕಾರ ಸಿರಿಯಾ ಹಾಗೂ ಟರ್ಕಿಯಿಂದ ಈ ವ್ಯಕ್ತಿ ಮರಳುತ್ತಿದ್ದರು, ಬಂಧಿತ ವ್ಯಕ್ತಿ ಕೇರಳ ಮೂಲದವನು ಎಂದು ಗುರುತಿಸಲಾಗಿದೆ.  ದೆಹಲಿ ಪೊಲೀಸರು ಪಡೆದುಕೊಂಡ ಮಾಹಿತಿ ಮೆರೆಗೆ ದೆಹಲಿ ಏರ್ ಪೋರ್ಟ್ ನಲ್ಲಿ ಈತನನ್ನು ಬಂಧಿಸಲಾಗಿದೆ.

Edited By

venki swamy

Reported By

Sudha Ujja

Comments