ರಮ್ಯಾ ಜತೆಗೆ ಕೆಲಸ ಮಾಡುವ ಆಸೆ ನಿಮಗಿದ್ಯಾ? ಅರ್ಜಿ ಹಾಕಿ

ನವದೆಹಲಿ, ರಮ್ಯಾ ಜತೆಗೆ ಕೆಲಸ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ಸಾಮಾಜಿಕ ಮಾಧ್ಯಮ ಘಟಕಕ್ಕೆ ಅಧ್ಯಕ್ಷರಾಗಿರುವ ರಮ್ಯಾ ಮೋದಿ ಸರ್ಕಾರದ ವಿರುದ್ಧ ಸಮರಕ್ಕಾಗಿ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆಂದೇ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಘಟಕವು 25 ಹುದ್ದೆಗಗಳಿಗೆ ಅರ್ಜಿ ಕರೆದಿದೆ.
ತನ್ನ ಉದ್ಯೋಗವಕಾಶ ಸಂಬಂಧಿ ಲಿಂಕ್ಡ್ ಇನ್ ಆನ್ ಲೈನ್ ತಾಣದಲ್ಲಿ ವಿವಿಧ ಹುದ್ದೆಗಳಿಗೆ ಕಾಂಗ್ರೆಸ್ ಅರ್ಜಿ ಕರೆದಿದ್ದು,
ವಿಶ್ಲೇಷಣಾ ವ್ಯವಸ್ಥಾಪಕ, ಡಿಜಿಟಲ್ ಮೀಡಿಯಾ ಪ್ಲ್ಯಾನರ್ , ಡಾಟಾ ಅನಲಿಸ್ಟ್ , ಎನಿಮೇಟರ್ , ವಿಡಿಯೋ ಎಡಿಟರ್, ಕ್ಯಾರಿ ಕೇಚರ್, ಅಕೌಂಟ್ ಡೈರೆಕ್ಟರ್ ಸೇರಿದಂತೆ ಒಟ್ಟು 25 ಹುದ್ದೆಗಳ ನೇಮಕ ಮಾಡಿಕೊಳ್ಳಲಾಗುವುದು. ಕನ್ನಡ, ತಮಿಳು, ಗುಜುರಾತಿ ಲೇಖನಗಳು ಹಾಗೂ ಭಾಷಣಗಳನ್ನು ತುರ್ಜುಮೆ ಮಾಡುವವರಿಗೂ ಅರ್ಜಿ ಆಹ್ವಾನಿಸಲಾಗಿದೆ. ನಮ್ಮ ತಂಡವನ್ನು ವಿಸ್ತರಿಸುತ್ತಿದ್ದೇವೆ ಎಂದು ರಮ್ಯಾ ಸುದ್ದಿವಾಹಿನಿ ಯೊಂದಕ್ಕೆ ಖಚಿತಪಡಿಸಿದ್ದಾರೆ.
Comments