ಪ್ರತಿ ಶಾಲೆಯಲ್ಲಿ 50 ಲಕ್ಷ ಸಸಿ ನೆಡುವ ಗುರಿ?

ಸಸಿ ನೆಡುವುದನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಸರ್ಕಾರ ಸುಮಾರು 30 ಸಾವಿರ ಶಾಲೆಗಳಿಗೆ, 50 ಲಕ್ಷ ಸಸಿ ನೆಡುವ ಕಾರ್ಯಕ್ರಮದ ಬಗ್ಗೆ ನಿರ್ಧಾರ ಕೈಗೊಂಡಿದ್ದು, ತೆಲಂಗಾಣ ಸರ್ಕಾರ ಜಾರಿಗೆ ಮಾಡಿರುವ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಹಲವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದ್ದು, ಸಸಿ ನೆಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.
ಸಭೆ ಬಳಿಕ ಮಾತನಾಡಿರುವ ತೆಲಂಗಾಣದ ಉಪಮುಖ್ಯಮಂತ್ರಿ ಕಡಿಯಾಂ ಶ್ರೀಹರಿ, ಪ್ರತಿಯೊಂದು ಶಾಲೆಗಳಲ್ಲಿ ಈ ವಿನೂತನ
ಕಾರ್ಯಕ್ರಮ ಜಾರಿಗೆ ಬರಲಿದ್ದು, ಮಕ್ಕಳು ಶಾಲೆಗಳಿಗೆ ಬಂದ ತಕ್ಷಣ ಪ್ರತಿ ದಿನ ಒಂದೊಂದು ಸಸಿ ನೆಡುವ ಮೂಲಕ ತರಗತಿಗೆ
ಹಾಜರಾಗಬೇಕು, ಪ್ರಸಕ್ತ ವರ್ಷ ದಿಂದ ತೆಲಂಗಾಣ ರಾಜ್ಯದಲ್ಲಿರುವ ಎಲ್ಲಾ ಶಾಲೆಗಳಲ್ಲೂ ಸುಮಾರು 50 ಲಕ್ಷ ಸಸಿಗಳನ್ನು ನೆಡುವ
ಉದ್ದೇಶ ಹೊಂದಲಾಗಿದೆ ಅಭಿಪ್ರಾಯ ಪಟ್ಟಿದ್ದಾರೆ.
ಹಲವು ರಾಜ್ಯಗಳು ಇದನ್ನೇ ಅನುಸರಿಸಬೇಕು. ಮಕ್ಕಳಲ್ಲಿ ಸಸಿ ನೆಡುವುದರ ಕುರಿತು ಅರಿವು ಮೂಡಿಸಬೇಕು. ಪ್ರತಿಯೊಂದು ರಾಜ್ಯ
'ಗ್ರೀನ್ ಡೇ' ಅನ್ನು ಜುಲೈ 15ರಂದು ಆಚರಿಸುವಂತೆ ಕರೆ ನೀಡಿದ ಅವರು, ಗಿಡಗಳನ್ನು ರಕ್ಷಣೆ ಮಾಡುವ
ಶಾಲೆಗಳಿಗೆ ಪ್ರತಿ ವರ್ಷ ಪ್ರಶಸ್ತಿ ನೀಡುವ ಕಾರ್ಯಕ್ರಮವು ಕೂಡ ಇದೆ. ಸಸಿ ನೆಡುವುದರ ಕುರಿತು ಪ್ರತಿ ಶಾಲೆಗೂ
ತೆರಳಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
Comments