ಇಂದಿನಿಂದ ಕಾವೇರಿ ಮೂಲ ಅರ್ಜಿ ವಿಚಾರಣೆ
ಬೆಂಗಳೂರು ಕಾವೇರಿ ನ್ಯಾಯಮಂಡಳಿ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರಿಂ ಕೋರ್ಟ್ ನಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಸಲ್ಲಿಸಿರುವ ಅರ್ಜಿ ಇಂದಿನಿಂದ ಸುಪ್ರಿಂನಲ್ಲಿ ವಿಚಾರಣೆ ನಡೆಯಲಿದೆ. ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳಾದ ಕರ್ನಾಟಕ, ಪುದಚೆರಿ, ತಮಿಳುನಾಡು, ಕೇರಳ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ಆದೇಶ ಮಾಡಿದೆ. ರಾಜ್ಯದ ಪರ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ನೇತೃತ್ವದ ತಂಡ ಸುಪ್ರಿಂ ಕೋರ್ಟ್ ನಲ್ಲಿ ವಾದ ಮಾಡಲಿದೆ.
ನ್ಯಾಯಮಂಡಳಿ ಆದೇಶ ಪ್ರಕಾರ, ಕಾವೇರಿ ನದಿಯಲ್ಲಿ ಒಟ್ಟು ೭೪೦ ಟಿಎಂಸಿ ನೀರು ಲಭ್ಯವಾಗಲಿದ್ದು, ಅದರಲ್ಲಿ ತಮಿಳುನಾಡಿಗೆ ೪೧೯ ಟಿಎಂಸಿ ಕರ್ನಾಟಕಕ್ಕೆ ೨೭೦, ಕೇರಳಕ್ಕೆ ೩೦ ಟಿಎಂಸಿ, ಪುದುಚೆರಿಗೆ ೭ ಟಿಎಂಸಿ, ನೀರು ಹಂಚಿಕೆ ಮಾಡಿ ಆದೇಶ ಮಾಡಿದೆ. ನ್ಯಾಯಮಂಡಳಿ ಆದೇಶದ ಪ್ರಕಾರ ಕರ್ನಾಟಕ ತಮಿಳುನಾಡಿಗೆ ಪ್ರತಿ ವರ್ಷ ೧೯೨ ಟಿಎಂಸಿ ನೀರು ಬಿಡಬೇಕು. ನ್ಯಾಯಮಂಡಳಿಯ ಆದೇಶವನ್ನೇ ರಾಜ್ಯ ಸರ್ಕಾರ ಪ್ರಶ್ನೆ ಮಾಡಿದೆ.
ಅಲ್ಲದೇ ಒಟ್ಟು ಲಭ್ಯವಿರುವ ನೀರಿನಲ್ಲಿ ಕರ್ನಾಟಕಕ್ಕೆ ಕಡಿಮೆ ನೀಡಲಾಗಿದೆ. ಸಾಮಾನ್ಯ ಮಳೆ ವರ್ಷದಲ್ಲಿ ೧೯೨ ಟಿಎಂಸಿ ನೀರು
ಬಿಡುವಂತೆ ಆದೇಶಿಸಲಾಗಿದೆ. ಮಳೆ ಕೊರತೆಯಾದರೆ, ಎಷ್ಟು ನೀರು ಬಿಡಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ, ಅಲ್ಲದೇ ಕಾವೇರಿ
ಕೊಳ್ಳದ ಭಾಗದಲ್ಲಿ ಬೆಂಗಳೂರು ಕೂಡ ಸೇರಿರುವುದರಿಂದ ಬೆಂಗಳೂರಿಗೆ ಒಂದು ಭಾಗದಲ್ಲಿ ಬೆಂಗಳೂರು ಕೂಡ ಸೇರಿರುವುದರಿಂದ
ಬೆಂಗಳೂರಿಗೆ ಕುಡಿಯುವ ನೀರಿನ ಹಂಚಿಕೆಯಲ್ಲಿಯೂ ನ್ಯಾಯ ಒದಗಿಸಿಲ್ಲ. ಕೇವಲ ಬೆಂಗಳೂರಿನ ಒಂದು ಭಾಗವನ್ನು ಮಾತ್ರ
ನ್ಯಾಯಮಂಡಳಿ ಆದೇಶದಲ್ಲಿ ಪರಿಗಣಿಸಲಾಗಿದೆ. ಅದನ್ನು ಮರು ಪರಿಶೀಲನೆ ಮಾಡಬೇಕು ಎನ್ನುವುದು ರಾಜ್ಯ ಸರ್ಕಾರದ ವಾದವಾಗಿದೆ.
Comments