ಈ ಹಳ್ಳಿಯ ಜನರಿಗಾಗಿ ಜಯಾ ಬಚ್ಚನ್ ನೀಡುತ್ತಿರುವ ಕೊಡುಗೆಯೇನು?
ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಹಳ್ಳಿಯೊಂದನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪತ್ನಿ. ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಹಳ್ಳಿಯೊಂದನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಉತ್ತರಪ್ರದೇಶದ ಹಳ್ಳಿಯೊಂದರ ಅಭಿವೃದ್ಧಿಯ ಕಾಯಕಲ್ಪಕ್ಕೆ ಜಯಾ ಬಚ್ಚನ್ ಮುಂದಾಗಿದ್ದು,ಸಂತ ರವಿದಾಸ್ ನಗರ ಜಿಲ್ಲೆಯೊಂದರ ಹಳ್ಳಿಯನ್ನು ದತ್ತು ಪಡೆದುಕೊಂಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಅವರ ಪತ್ರ ಬಂದು ತಲುಪಿದೆ. ಸಂಸದರ ಆದರ್ಶ ಗ್ರಾಮ ವಿಕಾಸ ಯೋಜನೆ ಅಡಿ ಜಯಾ ಬಚ್ಚನ್ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಶೀರ್ಘದಲ್ಲೇ ಹಳ್ಳಿಯ ಸಂಪೂರ್ಣ ನೀಲ ನಕ್ಷೆಯನ್ನು ತಯಾರು ಮಾಡಲಾಗುವುದುಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರ್ಶಗ್ರಾಮದ ಯೋಜನೆ ಅಡಿ ಈ ಹಳ್ಳಿಗೆ ಸಕಲ ಸೌಲಭ್ಯ ಒದಗಿಸಲಾಗುತ್ತದೆ. 130 ಕುಟುಂಬಗಳಿರೋ ಈ ಗ್ರಾಮದಲ್ಲಿ, 970 ಜನಸಂಖ್ಯಾ ಇದೆ.
Comments