ನಮಾಜ್ ಪ್ರಾರ್ಥನೆ ವೇಳೆ ನಡೀತು ಭಾರೀ ಗಲಾಟೆ
ಮುಂಬೈ : ವಿಮಾನ ನಿಲ್ದಾಣವೊಂದರಲ್ಲಿ ನಮಾಜ್ ಪ್ರಾರ್ಥನೆ ಮಾಡುವ ಸಂಬಂಧ ಭಾರೀ ಗದ್ದಲ ಏರ್ಪಟ್ಟಿದೆ. ಮುಂಬೈ ಏರ್ ಪೋರ್ಟ್ ನಲ್ಲಿ ನಮಾಜ್ ಪ್ರಾರ್ಥನೆ ಮಾಡುವುದನ್ನು ವಿರೋಧ ವ್ಯಕ್ತಪಡಿಸಿರುವ ಬಿಜೆಪಿಯ ಮುಖಂಡರೊಬ್ಬರು ಭಾರೀ ಗಲಾಟೆ ಮಾಡಿದ ಘಟನೆ ವರದಿಯಾಗಿದೆ.
ಶಿವಾಜಿ ಇಂಟರ್ ನ್ಯಾಶನಲ್ ಏರ್ ಪೋರ್ಟ್ ನಲ್ಲಿ ನಾಲ್ಕು ಮಂದಿ ಮುಸ್ಲಿಂ ಯಾತ್ರಿಕರು ನಮಾಜ್ ಮಾಡುತ್ತಿದ್ದರು. ಈ ವೇಳೆ ಇತರ ಪ್ರಯಾಣಿಕರು ಓಡಾಡಲು ಕಷ್ಟವಾಗುತ್ತಿತ್ತು. ಅಲ್ಲೇ ಇದ್ದ ಸಿಐಎಸ್ ಎಫ್ ಯೋಧರು ನಮಾಜ ಮಾಡುವರಿಗೆ ಅವಕಾಶ ಮಾಡಿ
ಕೊಟ್ಟು, ದೂರ ದಿಂದ ನಡೆದಾಡುವಂತೆ ಪ್ರಯಾಣಿಕರಿಗೆ ಹೇಳುತ್ತಿದ್ದರು. ಇದನ್ನು ಅರಿತ ಬಿಜೆಪಿ ಮುಖಂಡ ವಿನಿತ್ ಗೋಯೆಂಕಾ
ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ವಿರೋಧ ವ್ಯಕ್ತಪಡಿಸಿರುವ ಸಿಐಎಸ್ಎಫ್ ಯೋಧರು ಹಾಗೂ ಬಿಜೆಪಿ ಮುಖಂಡ ಗೋಯೆಂಕಾ ಮಧ್ಯೆ ಭಾರೀ ಗದ್ದಲ
ಏರ್ಪಟ್ಟಿದೆ. ಇಬ್ಬರ ಮಧ್ಯೆ ಘರ್ಷಣೆ ಏರ್ಪಟ್ಟಿದೆ. ಈ ಕುರಿತು ಮಾಧ್ಯಮದವರ ಮಾತನಾಡಿರುವ ಬಿಜೆಪಿ ಮುಖಂಡರು ವಿಮಾನ
ನಿಲ್ದಾಣದಲ್ಲಿ ನಮಾಜ ಪ್ರಾರ್ಥನೆ ಮಾಡಲು ಮುಸ್ಲಿಂ ಯಾತ್ರಿಕರಿಗೆ ಪ್ರತ್ಯೇಕ ಸ್ಥಳ ನೀಡಲಾಗಿದೆ. ನಮಾಜ್ ಪ್ರಾರ್ಥನೆ ಮಾಡಲು
ಅವಕಾಶ ನೀಡಲಾಗಿದೆ. ಆದ್ರೆ ನಮಗೂ ಪೂಜೆ ಮಾಡಲು ಅನುಮತಿ ನೀಡಿ ಎಂದು ಸಿಐಎಸ್ಎಫ್ ಯೋಧರ ವಿರುದ್ಧ ಅವರು
ಆರೋಪ ಮಾಡಿದ್ದಾರೆ.
Comments