ತನ್ನ ಹೆಣ್ಣುಮಕ್ಕಳನ್ನೇ ಬಳಸಿ ಹೊಲ ಉಳುಮೆ ಮಾಡಿದ ರೈತ

ಮಧ್ಯಪ್ರದೇಶ: ದೇಶದಲ್ಲಿ ರೈತನ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಾಗಿದೆ. ಮಧ್ಯಪ್ರದೇಶದಲ್ಲಿ ರೈತನೊಬ್ಬ ಉಳುಮೆ ಮಾಡಲು ಎತ್ತು ಖರೀದಿ ಮಾಡುವಷ್ಟು ಹಣ ಇಲ್ಲ ಎಂಬ ಕಾರಣಕ್ಕೆ ತನ್ನ ಹೆಣ್ಣು ಮಕ್ಕಳಿಬ್ಬರನ್ನು ಬಳಸಿಕೊಂಡು ಹೊಲ ಉಳುಮೆ ಮಾಡಿದ ಘಟನೆ ವರದಿಯಾಗಿದೆ.
ಸಹೋರ್ ಜಿಲ್ಲೆಯ ಬಸಂತ್ ಪುರ್ ಗ್ರಾಮದ ರೈತ ಹೊಲ ಉಳುಮೆ ಮಾಡುವುದಕ್ಕೆ ಎತ್ತು ಖರೀದಿಸುವಷ್ಟು ಹತ್ತಿರ ದುಡ್ಡಿಲ್ಲ,ಅದಕ್ಕಾಗಿ ಆತ ಇಬ್ಬರು ಮಕ್ಕಳಾದ ರಾಧಿಕಾ, ಕುಂತಿ ಅವರನ್ನು ಬಳಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ಆರ್ಥಿಕ ಸಮಸ್ಯೆಯಿಂದ ನನ್ನಿಬ್ಬರ ಹೆಣ್ಣುಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಿದ್ದೇನೆ ಎಂದು ರೈತ ತಿಳಿಸಿದ್ದಾನೆ. ವಿಷ್ಯ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು,ಸರ್ಕಾರಿ ಯೋಜನೆಯಡಿ ನೆರವು ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Comments