ದಸರಾ ಜಂಬೂ ಸವಾರಿಗೆ ಈ ಬಾರಿ ಅರ್ಜುನನದ್ದೇ ಸಾರಥ್ಯ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾದ ಈ ಬಾರಿ ಜಂಬೂ ಸವಾರಿಗೆ 12 ಆನೆಗಳನ್ನು ಗುರುತಿಸಲಾಗಿದ್ದು, ಜಂಬೂ ಸವಾರಿಗೆ ಈ ಬಾರಿ ಅರ್ಜುನದ್ದೇ ಸಾರಥ್ಯ ಇರಲಿದೆ. ಈಗಾಗ್ಲೇ ಮೈಸೂರು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯಾಧೀಕಾರಿಗಳುಅರ್ಜುನನ್ನು ತಪಾಸಣೆ ಮಾಡಿ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರಂತೆ. ಮತ್ತಿಗೊಂಡ ಶಿಬಿರದಲ್ಲಿ ಅಭಿಮನ್ಯು, ಬಲರಾಮ,ದುಬಾರೆ ಶಿಬಿರದಲ್ಲಿ ವಿಜಯ, ಕಾವೇರಿ, ಗೋಪಾಲಸ್ವಾಮಿ, ಹರ್ಷ, ಪ್ರಶಾಂತ, ವಿಕ್ರಮ, ಗೋಪಿ, ಕೆ.ಗುಡಿ ಶಿಬಿರದಲ್ಲಿ ದುರ್ಗಾ ಪರಮೇಶ್ವರಿ,ಗಜೇಂದ್ರ ಆನೆಗಳನ್ನು ಪರಿಶೀಲಿಸಲಾಗಿದೆ. 12 ಆನೆಗಳ ಜತೆಗೆ ಶ್ರೀನಿವಾಸ್ ಹಾಗೂ ಭೀಮಾ ಆನೆಯನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ.
Comments