ಅಹಮದಾಬಾದ್ ವಿಶ್ವ ಪಾರಂಪರಿಕ ನಗರ- ಯುನಸ್ಕೋ ಘೋಷಣೆ
ಅಹಮದಾಬಾದ್: ಅಹಮದಾಬಾದ್ ನಗರವನ್ನು ಜಗತ್ತಿನ ವಿಶ್ವ ಪಾರಂಪರಿಕ ನಗರ ಎಂದು ಯುನಸ್ಕೋ ಘೋಷಣೆ ಮಾಡಿದೆ. ಗುಜುರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಧ್ಯರಾತ್ರಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಸಾಂಸ್ಕೃತಿಕ ಸಂಸ್ಥೆ ಯನಸ್ಕೋ ಶನಿವಾರ 600 ವರುಷ ಪ್ರಾಚೀನ ಗೋಡೆ ನಗರವಾದ ಅಹಮದಾಬಾದ್ ಅನ್ನು ವಿಶ್ವಪಾರಂಪರಿಕ ನಗರವೆಂದುಘೋಷಿಸಿದೆ. ಯುನಸ್ಕೋ ವಿಶ್ವ ಪಾರಂಪರಿಕ ಸಮಿತಿ ಪೋಲೆಂಡ್ ನಲ್ಲಿ ಶನಿ
2010ರಲ್ಲಿ ಪ್ರಧಾನಿ ಮೋದಿ ಯುನಸ್ಕೋಗೆ ಅಹಮದಾಬಾದ್ ನಲ್ಲಿ ಕಡತವನ್ನು ಜಾರಿಗೊಳಿಸುವ ಮೂಲಕ ಪ್ರಯಾಣ ಆರಂಭವಾಯಿತು.ಪ್ಯಾರಿಸ್, ವಿಯೆನ್ನಾ, ಬ್ರಸೆಲ್ಸ್, ರೋಮ್ ಸೇರಿದಂತೆ ಜಗತ್ತಿನಾದ್ಯಂತವಿರುವ 287 ವಿಶ್ವ ಪಾರಂಪರಿಕ ನಗರಗಳ ಪಟ್ಟಿಗೆ ಅಹಮದಾಬಾದ್ ಸೇರ್ಪಡೆಗೊಂಡಿದೆ.
600 ವರ್ಷಗಳ ಕಾಲ ಮಹತ್ಮಾ ಗಾಂಧಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರಾರಂಭಿಸಿದ ಅಹಮದಾಬಾದ್
ಮಹಾನಗರ ಶಾಂತಿಯನ್ನು ಸಾರುತ್ತದೆ. ಇಲ್ಲಿ ಹಿಂದೂ, ಜೈನ ದೇವಸ್ಥಾಗಳು ಇದ್ದು ಸುಂದರವಾದ ಶಿಲ್ಪಕಲೆಗಳನ್ನು ಕಾಣಬಹುದು.
ಇಲ್ಲಿನ ಇಂಡೋ- ಇಸ್ಲಾಮಿಕ್ ವಾಸ್ತುಶಿಲ್ಪಮತ್ತು ಹಿಂದೂ ಮುಸ್ಲಿಂ ಕಲೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಹಾಗೇ
ಅಭಿವೃದ್ಧಿಯಲ್ಲಿ ವೇಗವನ್ನು ಪಡೆದುಕೊಂಡಿರುವ ನಗರ ಭಾರತದ ಮೊದಲ ಸ್ಮಾರ್ಟ್ ಸಿಟಿಯಾಗಿದೆ. ಈ ಮೂಲಕ ಪ್ರಾಚೀನ ಪರಂಪರೆಯನ್ನು ಉಳಿಸಿಕೊಂಡಿದೆ.
Comments