ಮಹಿಳೆಯರಿಂದ ಪಾದ ತೊಳೆಸಿಕೊಂಡ ಮುಖ್ಯಮಂತ್ರಿ!
ಜಾರ್ಖಂಡ್ : ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರು ಮಹಿಳೆಯರಿಂದ ಪಾದಗಳನ್ನು ತೊಳೆಸಿಕೊಂಡಿದ್ದಾರೆ. ಜೆಮ್
ಶೆಡ್ ಪುರದ ಬ್ರಹ್ಮಲೋಕ ಧಾಮದಲ್ಲಿ ನಡೆಯುತ್ತಿರುವ ಗುರು ಮಹೋತ್ಸವ ಕಾರ್ಯಕ್ರಮದಲ್ಲಿ ಇಬ್ಬರು ಮಹಿಳೆಯರು
ಮುಖ್ಯಮಂತ್ರಿಗೆ ಕಾಲು ತೊಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಭದ್ರತಾ ಸಿಬ್ಬಂದಿಗಳ ಜತೆಗೆ ಕೈ ಮುಗಿದುಕೊಂಡ ಬಂದ ರಘುವಿರ ದಾಸ್ ಅವರನ್ನು ದೊಡ್ಡ ತಟ್ಟೆಯೊಂದರಲ್ಲಿ ನಿಲ್ಲಿಸಿ ಹೂವಿನ
ಪಕಳೆಗಳನ್ನೊಳಗೊಂಡ ನೀರನ್ನು ಇಬ್ಬರು ಮಹಿಳೆಯರು ಬಿಂದಿಗೆಯಿಂದ ಅವರ ಪಾದಕ್ಕೆ ನೀರು ಹಾಕಿ ತೊಳೆಯುತ್ತಾರೆ. ಬಳಿಕ
ರಘುವರ್ ದಾಸ್ ಮುಂದೆ ಹೋಗುವ ದೃಶ್ಯಗಳು ಕಂಡು ಬಂದಿವೆ.
Comments