70 ಲಕ್ಷ ವಾಹನ ಸಂಖ್ಯೆ ಹೆಚ್ಚಳ!!
ಬೆಂಗಳೂರು: ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಏರುತ್ತಲೇ ಇದೆ. 2011 -12ರಲ್ಲಿ 41.56 ಲಕ್ಷದಷ್ಟು ವಾಹನಗಳ ಸಂಖ್ಯೆಯು ಪ್ರಸ್ತುತ 2017 ಜೂನ್ ವರೆಗೆ 70.31ಕ್ಕೆ ಏರಿದೆ. ಆರು ವರ್ಷಗಳಲ್ಲಿ 27.75 ಲಕ್ಷ ವಾಹನಗಳ ಸಂಖ್ಯೆ ಏರುತ್ತಲೇ ಇದೆ. ಜೂನ್ ಅಂತ್ಯಕ್ಕೆ 70 ಲಕ್ಷ ಗಡಿ ದಾಟಿದೆ. ಇದರಲ್ಲಿ ೪೮ ಲಕ್ಷ ದ್ವಿಚಕ್ರ ವಾಹನಗಳು 14.40 ಲಕ್ಷ ಕಾರುಗಳಿವೆ.
ಏಳು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಣಾಮ
ಪಾರ್ಕಿಂಗ್ ಹಾಗೂ ದಟ್ಟಣೆ ಸಮಸ್ಯೆ ಜಾಸ್ತಿಯಾಗುತ್ತಿದೆ. ಮೆಟ್ರೋ ಕಾರ್ಯಾಚರಣೆ ಬಳಿಕ ಜನ ಹೆಚ್ಚಾಗಿ ರೈಲು ಬಳಸುತ್ತಾರೆ.ಆಗ ವಾಹನಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಅಂದುಕೊಂಡಿದ್ದೇವು. ಆದರೆ ಸದ್ಯಕ್ಕಂತೂ ದಟ್ಟಣೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Comments