GST ತಪ್ಪಿಸಿಕೊಳ್ಳಲು ಮಾಡ್ತಿದ್ದಾರೆ ಮಾಸ್ಟರ್ ಪ್ಲಾನ್..!!
ಚೆನ್ನೈನ ಚಪ್ಪಲಿ ಅಂಗಡಿ ಮಾಲೀಕ ಒಂದು ಜೊತೆ ಚಪ್ಪಲಿಗೆ ಬೇರೆ ಬೇರೆ ಬಿಲ್ ಹಾಕಿ ಮಾರ್ತಿದ್ದಾನೆ. ಬಟ್ಟೆ ಅಂಗಡಿಯವನು ಚೂಡಿದಾರ್ ಸೆಟ್ ನಲ್ಲಿದ್ದ ದುಪ್ಪಟ್ಟಾವನ್ನು ಪ್ರತ್ಯೇಕವಾಗಿ ಮಾರಾಟ ಮಾಡ್ತಿದ್ದಾರೆ. ಬಾಸುಮತಿ ಕಂಪನಿ ಟ್ರೇಡ್ ಮಾರ್ಕ್ ರಿಜಿಸ್ಟ್ರೇಶನ್ ಅನ್ನೇ ರದ್ದು ಮಾಡ್ತಿದೆ.
ಹೀಗೆ ಉದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರೆಲ್ಲ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಬೇರೆ ಬೇರೆ ದಾರಿ ಹುಡುಕ್ತಿದ್ದಾರೆ. ಜುಲೈ 1ರಿಂದ ಜಾರಿಯಾಗಿರುವ ಜಿಎಸ್ಟಿಯಿಂದ ತಪ್ಪಿಸಿಕೊಳ್ಳುವುದು ಅವರ ಮಾಸ್ಟರ್ ಪ್ಲಾನ್.
ಕೆಲವು ವಸ್ತುಗಳ ಮೇಲೆ ತೆರಿಗೆ ವಿಧಿಸಿಲ್ಲ. ಕಾಟೇಜ್ ಚೀಸ್, ಪನೀರ್, ಜೇನುತುಪ್ಪ, ಗೋಧಿ, ಅಕ್ಕಿ ಹೀಗೆ ವಿವಿಧ ವಸ್ತುಗಳ ಮೇಲೆ ತೆರಿಗೆ ವಿಧಿಸಿಲ್ಲ. ಆದ್ರೆ ಕೆಲವು ಬ್ರಾಂಡೆಡ್ ಪದಾರ್ಥಗಳ ಮೇಲೆ ಶೇ.5 ರಷ್ಟು ತೆರಿಗೆ ಹಾಕಲಾಗಿದೆ. ಹಾಗಾಗಿ ವ್ಯಾಪಾರಿಗಳು ಆ ತೆರಿಗೆಯನ್ನು ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದಾರೆ.
ಜಿಎಸ್ಟಿ ಹೆಸರಲ್ಲಿ ನಡೆಯುತ್ತಿರುವ ಈ ಅವ್ಯವಹಾರ ಸರ್ಕಾರದ ಗಮನಕ್ಕೂ ಬಂದಿದೆ. ಕೆಲವು ಕಡೆಗಳಲ್ಲಿ ಗ್ರಾಹಕರಿಗೂ ವಂಚನೆಯಾಗುತ್ತಿದ್ದು, ಜನರಿಗೆ ಜಿಎಸ್ಟಿ ಬಗ್ಗೆ ಸಂಪೂರ್ಣ ಮಾಹಿತಿ ತಲುಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
Comments