ಟ್ರಂಪ್ ಗೆ ಮುಜುಗರ ಮಾಡಿದ ಪ್ರಥಮ ಮಹಿಳೆ!!!
ಪೋಲೆಂಡ್ : ಪೋಲೆಂಡ್ ಪ್ರವಾಸ ಕೈಗೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪೋಲೆಂಡ್ ನ ಪ್ರಥಮ
ಮಹಿಳೆಯೊಬ್ಬರು ಅವಮಾನ ಮಾಡಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋ
ವೊಂದರಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಲೆಂಡ್ ನಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ಪತ್ನಿ ಮಿಲೆನಿಯಾ ಕೂಡ
ಜತೆಗಿದ್ದರು.
ಆದ್ರೆ ಅಚ್ಚರಿಯೆಂಬತೆ ಪೋಲೆಂಡ್ ನ ಪ್ರಥಮ ಮಹಿಳೆ ಹ್ಯಾಂಡ್ ಶೇಕ್ ಮಾಡಲು ಬಂದ ಡೊನಾಲ್ಡ್ ಟ್ರಂಪ್ ಅವರಿಗೆ ಹ್ಯಾಂಡ್ ಶೇಕ್ ಮಾಡದೇ ಪತ್ನಿ ಮೆಲಾನಿಯಾಗೆ ಪೋಲೆಂಡ್ ಅದ್ಯಕ್ಷರ ಪತ್ನಿ ಹ್ಯಾಂಡ್ ಶೇಕ್ ಮಾಡಿರುವ ಘಟನೆ ವರದಿಯಾಗಿದೆ. ಇದರಿಂದಡೊನಾಲ್ಡ್ ಟ್ರಂಪ್ ಕೆಲ ಸಮಯ ಇರುಸು ಮುರುಸು ಅನುಭವಿಸಿದ ಪ್ರಸಂಗ ನಡೆದಿದೆ.
Comments