ಈ ಮಗುವಿಗೆಇಟ್ಟ ಹೆಸರು ಯಾವುದು ಗೊತ್ತಾ!!!
ರಾಜಸ್ಥಾನ: ರಾಜಸ್ಥಾನದಲ್ಲಿ ಜೂನ್ 30 ರಂದು ಮಧ್ಯರಾತ್ರಿ ಜನಿಸಿದ್ದ ಮಗುವಿಗೆ GST ಎಂದು ಹೆಸರಿಡಲಾಗಿತ್ತು. ಆದ್ರೆ ಛತ್ತೀಸಗಢ್
ದಲ್ಲಿ ಇದೀಗ ಮತ್ತೊಂದು ಮಗುವಿಗೆ ಜಿಎಸ್ ಟಿಎಂದು ಹೆಸರು ಇಡಲಾಗಿದೆ. ಛತ್ತೀಸಗಢ್ ಮೂಲದ ಜಗದೀಶ್ ಹಾಗೂ ಸೋನ್ವಾನಿ
ದಂಪತಿಗೆ ಜನಿಸಿದ ಮಗುವಿಗೆ GST ಎಂದು ಹೆಸರಿಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಮಗುವಿನ ಪೋಷಕರು, ಈ ನಮಗೆ ಜಿಎಸ್ ಟಿ ಕುರಿತು ಯಾವುದೇ ತಿಳುವಳಿಕೆ ಇರಲಿಲ್ಲ. ಆದರೆ
ಇತ್ತೀಚೆಗೆ ಜಿಎಸ್ ಟಿ (GST) ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ. ಈ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲವಿತ್ತು. ಮಹತ್ವ ಪಡೆದಿರುವ
ಜಿಎಸ್ ಟಿ ಬಗ್ಗೆ ತಿಳಿದುಕೊಂಡೆವು.ಆದ ಕಾರಣ ನಮ್ಮ ಮಗುವಿನ ಹೆಸರನ್ನು ಜಿಎಸ್ ಟಿ ಎಂದು ಹೆಸರಿಟ್ಟಿದ್ದೇವೆ. ಇದು ನಮೆಗೆ ನಮ್ಮ
ಹಳ್ಳಿಗೆಲ್ಲಾ ಸಂತೋಷದ ವಿಷಯ ಎಂದು ಮಗುವಿನ ಅಪ್ಪ ಹೇಳಿದರು.
ಜುಲೈ ೧ರಂದು ಜಾರಿಯಾಗಿರುವ ಜಿಎಸ್ ಟಿ ದಿನವನ್ನು ನಾವು ಎಂದಿಗೂ ಮರೆಯಲಾಗುವುದಿಲ್ಲ. ನನ್ನ ಕುಟುಂಬ ಹಾಗೂ ಹಳ್ಳಿಯ
ಜನರು ಈ ದಿನವನ್ನು ಮರೆಯುವುದಿಲ್ಲ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.
Comments