ಗಿಣಿ ಹಾಗೆ ಕಾಣಿಸಿಕೊಳ್ಳುವ ಇಚ್ಛೆ,. 110 ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ!!!

ಲಂಡನ್ : ಜಗತ್ತಿನಲ್ಲಿ ಜನರ ಬಯಕೆ ವಿಭಿನ್ನವಾಗಿರುತ್ತದೆ. ಇಂಗ್ಲೆಂಡ್ ಮೂಲದ ಟೆಡ್ ಎಂಬ ವ್ಯಕ್ತಿ ಗಿಣಿ ಹಾಗೇ ಕಾಣಿಸಿಕೊಳ್ಳುವ
ಇಚ್ಛೆಯಿದೆಯಿಂದ ತನ್ನ ದೇಹದ ಮೇಲೆ ಬರೋಬ್ಬರಿ 110 ಟ್ಯಾಟೂ ಹಾಕಿಸಿಕೊಂಡಿದ್ದಾರೆ.ಈ ವ್ಯಕ್ತಿಯ ಇಚ್ಛೆ ಕೇವಲ ಇಷ್ಟಕ್ಕೆ
ನಿಲ್ಲುವುದಿಲ್ಲ. ವಿಚಿತ್ರವೆಂದರೆ ತನ್ನ ಕಿವಿಗಳನ್ನು ಕತ್ತರಿಸಿಕೊಂಡಿದ್ದಾರೆ. ಸರ್ಜರಿ ಬಳಿಕ ಈತನಿಗೆ ಸೋಂಕು ತಗುಲಿ ಕ್ರಮೇಣ ದೇಹದ
ಎಲ್ಲಾ ಭಾಗಗಳಲ್ಲು ತಲುಪಿದೆ. ಇದರಿಂದ ಇವರ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿತ್ತು. ಕಡೆಗೆ ವೈದ್ಯರು ಹೇಗೋ ಮಾಡಿ
ಈ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.
ಆದರೂ ಈ ವ್ಯಕ್ತಿ ಹಿಂದೆ ಸರಿದಿಲ್ಲ. ಹೇಗಾದ್ರೂ ಮಾಡಿ ಗಿಳಿ ಹಾಗೇ ಕಾಣಿಸಿಕೊಳ್ಳುವ ಇಚ್ಛೆಯಿಂದ ಶಸ್ತ್ರಚಿಕಿತ್ಸೆ ಮಾಡುವ
ವೈದ್ಯರಿಗಾಗಿ ಹುಡುಕಾಟ ನಡೆಸಿದ್ದಾರಂತೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೆ ಟೆಡ್ ಕುಟುಂಬದವರ ವಿರೋಧವಿದೆ, ಈ ಮಧ್ಯೆ
ಕುಟುಂಬದವರ ಜತೆಗೆ ವಾಸಿಸುತ್ತಿಲ್ವಂತೆ.
ಇಂಗ್ಲೆಂಡ್ ನ ಬ್ರಿಸ್ಟಲ್ ನಲ್ಲಿ ವಾಸಿಸುತ್ತಿರುವ ಡೆಡ್ ’ ಗಿಳಿ ಮನುಷ್ಯ’ ಅಂತಲೇ ಫೇಮಸ್ ಆಗಿದ್ದಾರೆ. ಈಗಾಗ್ಲೇ ಇವರ ಬಳಿ ನಾಲ್ಕು
ಗಿಳಿಗಳಿವೆ.
Comments