ಜಮ್ಮು ಕಾಶ್ಮೀರದಲ್ಲಿ ಜಿಎಸ್ ಟಿ (GST) ಜಾರಿಗೆ ಒಪ್ಪಿಗೆ

ಕಾಶ್ಮೀರ: ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಜಿಎಸ್ ಟಿ ಜಾರಿ ಕುರಿತಂತೆ ಒಪ್ಪಿಗೆ ದೊರೆತಿದೆ. ಉನ್ನತ ಮೂಲಗಳ ಪ್ರಕಾರ, ಜಮ್ಮು
ಕಾಶ್ಮೀರದ ವಿಧಾನಸಭೆಯಲ್ಲಿ ಜೆಎಸ್ ಟಿ ಕುರಿತಾದ ನಿರ್ಣಯ ಮಂಡನೆಯಾಗಿದ್ದು, ರಾಷ್ಟ್ರಪತಿ ಆದೇಶದ ಬಳಿಕ ಜುಲೈ 6ರಂದು
ರಾಜ್ಯದಲ್ಲಿ ಜಿಎಸ್ ಟಿ ಅನುಷ್ಠಾನಕ್ಕೆ ಬರಲಿದೆ.
ಜಮ್ಮುಕಾಶ್ಮೀರದಲ್ಲೂ ‘ಒಂದು ದೇಶ, ಒಂದು ತೆರಿಗೆ’ ಕನಸು ನನಸಾಗುವ ಸನ್ನಿಹಿತ ಬಂದೊದಗಿದೆ. ಜುಲೈ 1ರಂದು ದೇಶದಲ್ಲೆಡೆ
ಜಾರಿಯಾಗಿದ್ದ ಜಿಎಸ್ ಟಿ ಕಾಶ್ಮೀರದಲ್ಲಿ ಜಾರಿಗೆ ಬಂದಿರಲಿಲ್ಲ. ಇದೀಗ ಜಿಎಸ್ ಟಿ ಕಾಯ್ದೆಗೆ ಒಪ್ಪಿಗೆ ದೊರೆತಿದ್ದು, ಜುಲೈ 6ರಂದು
ಜಮ್ಮು ಕಾಶ್ಮೀರದಲ್ಲೂ ಜಿಎಸ್ ಟಿ ಜಾರಿಗೆ ಬರಲಿದೆ.
Comments