ಜಾನಪದ ಕೋಗಿಲೆ ಸುಕ್ರಿ ಬೊಮ್ಮೆಗೌಡರಿಗೆ ಹೆಚ್1ಎನ್1
ಬೆಂಗಳೂರು : ಪದ್ಮಶ್ರೀ ಪುರಸ್ಕೃತೆ, ಹಾಲಕ್ಕಿ ಕೋಗಿಲೆ ಸುಕ್ರಿ ಬೊಮ್ಮೆಗೌಡ ಅವರು ಹೆಚ್1ಎನ್1 ನಿಂದ ಬಳಲುತ್ತಿರುವುದು ತಿಳಿದು
ಬಂದಿದೆ. ಸುಕ್ರಿ ಅವರನ್ನು ನೋಡಿಕೊಳ್ಳುತ್ತಿರುವ ಡಾ.ಜಗದೀಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಶ್ವಾಸಕೋಶದ ಸೋಂಕಿಗೆ
ಒಳಗಾಗಿದ್ದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಹೆಚ್1ಎನ್1 ನಿಂದ ಬಳಲುತ್ತಿರುವುದು ತಿಳಿದು ಬಂದಿದೆ. ಸದ್ಯ ಅವರಿಗೆ ಚಿಕಿತ್ಸೆ
ಮುಂದುವರಿದಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜುಲೈ 1ರಂದು ಜಯನಗರದ ಕಾಲೇಜಿನಲ್ಲಿ ನಡೆದಿದ್ದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕಾಗಿ ಸುಕ್ರಿ ಬೊಮ್ಮೆಗೌಡ ನಗರಕ್ಕೆ
ಆಗಮಿಸಿದ್ದರು. ಕಳೆದ 15 ದಿಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಸುಕ್ರಿ ಅವರು ಆಸ್ಪತ್ರೆಗೆ ಬಂದಾಗ ಶ್ವಾಸಕೋಶದ
ತೊಂದರೆಯಿಂದ ಬಳಲುತ್ತಿದ್ದರು. ಬಳಿಕ ಅವರಿಗೆ ಹೆಚ್1ಎನ್1 ಇರುವುದು ಪತ್ತೆಯಾಗಿತ್ತು. ಸದ್ಯ ಅವರಿಗೆ ಹೆಚ್1ಎನ್1 ಗೆ ಚಿಕಿತ್ಸೆ
ನೀಡಲಾಗುತ್ತಿದೆ.
Comments