ರಾತ್ರೋರಾತ್ರಿ ಹಬ್ಬಿದ ಸುದ್ದಿ,. ಮಾಂಗಲ್ಯ ಸರದ ಕೆಂಪು ಹವಳ ಒಡೆದು ಹಾಕಿದ ಮಹಿಳೆಯರು!
ಬಳ್ಳಾರಿ: ಮಾಂಗಲ್ಯ ಸರದ ಕೆಂಪು ಹವಳ ಮಾತಾಡಿ ತಮ್ಮ ಗಂಡಂದಿರು ಸಾಯುತ್ತಾರೆ ಎಂಬ ಗಾಳಿ ಸುದ್ದಿಯಿಂದ ಆತಂಕಗೊಂಡ ಮಹಿಳೆಯರು ತಮ್ಮ ಮಾಂಗಲ್ಯ ಸರದ ಕೆಂಪು ಹವಳವನ್ನು ರಾತ್ರೋ ರಾತ್ರಿ ಕಲ್ಲಿನಿಂದ ಕುಟ್ಟಿ ಪುಡಿ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಗಳಲ್ಲಿ ವರದಿಯಾಗಿದೆ.
ಮಂಗಳವಾರ ತಡರಾತ್ರಿ ಜಿಲ್ಲೆಯಾದ್ಯಂತ ಒಬ್ಬರಿಂದ ಒಬ್ಬರಿಗೆ ಹರಡಿದ ಸುಳ್ಳು ಸುದ್ದಿ ವದಂತಿಗೆ ಹೆದರಿದ ಮಹಿಳೆಯರು ರಾತ್ರಿಯೆಲ್ಲಾ ನಿದ್ದೆ ಮಾಡಿಲ್ಲ. ಎಲ್ಲಿ ತಮ್ಮ ಪತಿ ಸಾವನ್ನಪ್ಪುತ್ತಾರೋ ಎಂಬ ಭಯದಿಂದ ಮಾಂಗಲ್ಯ ಸರದ ಕೆಂಪು ಹವಳವನ್ನು ಕುಟ್ಟಿ ಪುಡಿ ಮಾಡಿದ್ದಾರೆ. ವಿಚಿತ್ರವೆಂದರೆ ಈ ಸುದ್ದಿ ಕೇವಲ ಬಳ್ಳಾರಿ ಅಷ್ಟೇ ಅಲ್ಲ ನೆರೆಯ ಕೊಪ್ಪಳ ಜಿಲ್ಲೆಯಲ್ಲೂ ಹಬ್ಬಿದೆ. ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕಿನ ಬಹುತೇಕ ಗ್ರಾಮದ ಮಹಿಳೆಯರು ಮಾಂಗಲ್ಯ ಸರದಲ್ಲಿನ ಹವಳ ಒಡೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೆಲ ಹಳ್ಳಿಗಳಲ್ಲೂ ಕೂಡ ಇದೇ ರೀತಿಯ ವಿಚಿತ್ರ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯಲ್ಲೂ ಮಹಿಳೆಯರು ತಾಳಿಯಲ್ಲಿರುವ ಮಣಿಯನ್ನು ಕುಟ್ಟಿ ಹಾಕಿದ್ದು, ಸಿರುಗುಪ್ಪ, ಸಂಡೂರು, ಕೂಡ್ಲಿಗಿ ತಾಲೂಕಿನಲ್ಲಿ ಮಹಿಳೆಯರು ತಾಳಿಯನ್ನು ಹರಿದು ತಾವೇ ಹವಳವನ್ನು ಕಲ್ಲಿನಿಂದ ಕುಟ್ಟಿದ್ದಾರೆ. ಸಂಬಂಧಿಕರಿಗೂ ಕರೆ ಮಾಡಿಮಾಹಿತಿ ನೀಡಿದ್ದಾರೆ.
Comments