ಮಹಾತ್ಮ ಗಾಂಧೀಜಿ ಅಪರೂಪದ ಚಿತ್ರ ಹರಾಜು
ಲಂಡನ್ : ಪೆನ್ಸಿಲ್ ನಲ್ಲಿ ರಚಿಸಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಪರೂಪದ ಚಿತ್ರ ಜುಲೈ 11ರಂದು ಹರಾಜಾಗಲಿದೆ.
ಮೇಲೆ ಕುಳಿತುಕೊಂಡಿರುವ ಗಾಂಧೀಜಿ ತದೇಕಚಿತ್ತದಿಂದ ಏನನ್ನೋ ಬರೆಯುತ್ತಿರುವ ಚಿತ್ರ ಇದಾಗಿದ್ದು, Truth is god,/ Mk
Gandhi/ 4.12.31 ಎಂಬ ಪದಗಳು ಇದರಲ್ಲಿವೆ.
ಸುಮಾರು 6.72 ಲಕ್ಷ ದಿಂದ 10.09 ಲಕ್ಷದವರೆಗೆ ಈ ಕಲಾಕೃತಿ ಮಾರಾಟವಾಗುವ ನಿರೀಕ್ಷೆ ಇದೆ. ಗಾಂಧೀಜಿ ತಂಗಿದ್ದಕಿಂಗ್ ಸ್ಲೇ
ಹಾಲ್ ಜತೆ ಸಂಪರ್ಕ ಹೊಂದಿದ್ದ ಸ್ಥಳೀಯರೊಬ್ಬರಿಗೆ ಈ ಚಿತ್ರವನ್ನು ನೀಡಲಾಗಿತ್ತು. ಈವರೆಗೆ ಅದು ಕುಟುಂಬದವರ ಬಳಿಯೇ
ಇತ್ತು.ಶರತ್ ಬೋಸ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಗಾಂಧಿ ಬರೆದಿದ್ದ ಪತ್ರಗಳನ್ನು ಇದೇ ವೇಳೆ ಹರಾಜು ಮಾಡುವ ಸಂಸ್ಥೆ
ಸೂತ್ ಬೇ ತಿಳಿಸಿದೆ.
Comments