ಚೀನಾದಲ್ಲಿ ಪ್ರವಾಹ,. 56ಜನರು ಬಲಿ
ಬೀಜಿಂಗ್ : ಚೀನಾದಲ್ಲಿ ಜಡಿ ಮಳೆ, ಪ್ರವಾಹ, ಭೂಕುಸಿತದಿಂದ ಕನಿಷ್ಠ 56 ಮಂದಿ ಬಲಿಯಾಗಿದ್ದಾರೆ. 22 ಮಂದಿ ನಾಪತ್ತೆಯಾಗಿರುವುದು ಮೂಲಗಳಿಂದ ತಿಳಿದು ಬಂದಿದೆ. ಝೆಝಿಯಾಂಗ್, ಆನ್ ಹುಯಿ, ಜಿಯಾಂಗ್ಸಿ, ಹುನಾನ್, ಗ್ವಾಂಗ್ ಡಾಂಗ್, ಶಾಕಿಂಗ್, ಸಿಶುವಾನ್, ಗಿಝೋ, ಯುನಾನ್ಮತ್ತು ಗ್ವಾಂಗ್ಸಿ ಪ್ರಾಂತ್ಯಗಳಲ್ಲಿ 27, 000 ಮನೆಗಳು ಕುಸಿದಿದ್ದು, ಇತರ 37,000 ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.
ವ್ಯಾಪಕ ಭೂಕುಸಿತ ಮತ್ತು ಬಿರುಗಾಳಿಯಿಂದಾಗಿ ವಿಪರೀತ ನಷ್ಟ ಉಂಟಾಗಿದೆ. ಈ ಭೀಕರ ಹಾನಿಯಿಂದಾಗಿ 25.27 ಬಿಲಿಯನ್ ಯುವಾನ್ ಅಥವಾ 3.72 ಬಿಲಿಯ ಡಾಲರ್ ಆರ್ಥಿಕ ನಷ್ಟ ಉಂಟಾಗಿದೆ. ಸರಕಾರ ಪ್ರವಾಹ ಪೀಡಿತ 20 ಪ್ರಾಂತ್ಯಗಳಿಗೆ 27.00 ಕೋಟಿ ಡಾಲರ್ ನೆರವು ನೀಡಿಜೆ ಎಂದು ಕ್ನಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
Comments