‘ಪೇಜಾವರ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಬಾರದು’
ಉಡುಪಿ:ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿರುವ ಹಿನ್ನಲೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಪೇಜಾವರ ಶ್ರೀಗಳ ಬಗ್ಗೆ ಯಾರುಲಘುವಾಗಿ ಹೇಳಿಕೆ ನೀಡಬಾರದು. ಅವರು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡುವುದನ್ನು ಮುತಾಲಿಕ್ ನಿಲ್ಲಿಸಬೇಕು ಎಂದುಬಿಎಸ್ ವೈ ಹೇಳಿದರು. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಪಡೆದು ಅಧಿಕಾರ ಹಿಡಿಯಲಿದೆ ಎಂದುಮಾಧ್ಯಮದವರ ಜತೆಗೆಬಿಎಸ್ ವೈ ಮಾತನಾಡಿದ್ದಾರೆ.
ತರೀಕೆರೆಯ ಲಕ್ಕವಳ್ಳಿ ಗ್ರಾಮದ ಯುವತಿಯೋರ್ವಳು ಅಮೆರಿಕಾದಲ್ಲಿ ಸ್ಕೂಬಾ ಡ್ರೈವಿಂಗ್ ವೇಳೆ ನಡೆದ ದುರ್ಘಟನೆಯಲ್ಲಿ ಕೋಮಾ ಸ್ಥಿತಿ ತಲುಪಿದ್ದಾಳೆ. ಆಕೆಯ ಕುಟುಂಬದವರಿಗೆ ವೀಸಾ ದೊರಕಿಸಿಕೊಡುವ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರೊಂದಿಗೆ ಮಾತನಾಡಿದ್ದೇನೆ ಎಂದರು.
Comments