ಯುಪಿ ಜನನಾಯಕ ಅಖಿಲೇಶ್ ಯಾದವ್ B'day spcl,

ಕಾನ್ಪುರ್ : ಇವತ್ತು ಜುಲೈ 1, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಖಿಲೇಶ್ ಯಾದವ್ ಅವರಿಗೆ ಶುಭಕೋರಲು ಲಕ್ಷಾಂತರ ಅಭಿಮಾನಿಗಳು ಅವರ ನಿವಾಸದ ಎದುರು ನೆರೆದಿದ್ದು, ತಮ್ಮ ನೆಚ್ಚಿನ ನಾಯಕನ ಬರ್ತಡೇ ದಿನದಂದು ಶುಭಕೋರಿದ್ದಾರೆ.
ಅಖಿಲೇಶ್ ಯಾದವ್ 1973ರಲ್ಲಿ ಜುಲೈ 1ರಂದು ರಾಜಸ್ಥಾನದ ಧೋಲ್ಪುರದಲ್ಲಿ ಜನಿಸಿದರು, ಮಿಲಿಟರಿ ಸ್ಕೂಲ್ ನಲ್ಲಿ ಅಭ್ಯಾಸ ನಡೆಸಿ ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಗಳಿಸಿದರು. 1998ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿ ಭಾರತಕ್ಕೆ ಬಂದ ಅವರು, ತಮ್ಮ ತಂದೆ ಮುಲಾಯಂ ಸಿಂಗ್ ಜತೆಗೆ ರಾಜಕೀಯ ವಲಯದಲ್ಲಿ ನುಗ್ಗಿ, ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಕೊಂಡರು.
ಅತಿ ದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಗೆಲುವನ್ನು ದೊರಕಿಸುವ ಮೂಲಕ ರಾಜಕೀಯ ಪಯಣಕ್ಕೆ ಮುನ್ನುಡಿ ಬರೆದರು. ಚಿಕ್ಕ ವಯಸ್ಸಿನಲ್ಲೇ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿಕೊಂಡ ಅಖಿಲೇಶ್ ಯಾದವ್ ತಮ್ಮದೇ ಆದ ವ್ಯಕ್ತಿತ್ವದಿಂದ ರಾಜನೀತಿಗೆ ಅರ್ಥ ನೀಡಿದ ರಾಜಕಾರಿಣಿ ಎಂದು ಖ್ಯಾತಿ ಗಳಿಸಿದವರು.
ಮೂರು ಬಾರಿ ಸಂಸದರಾಗಿದ್ದ ಅಖಿಲೇಶ್ ಯಾದವ್, 2012ರಲ್ಲಿ ಉತ್ತರಪ್ರದೇಶ ಯುವ ಮುಖ್ಯಮಂತ್ರಿ ಎಂಬ ಖ್ಯಾತಿ ಗಳಿಸಿದರು, ಸಂಸದೆ ಡಿಂಪಲ್ ಯಾದವ್ ಅಖಿಲೇಷ್ ಯಾದವ್ ಪತ್ನಿಯಾಗಿದ್ದಾರೆ.
Comments