ಜು.21 ರಂದು ರಾಜ್ಯಕ್ಕೆ ಸೋನಿಯಾ ಗಾಂಧಿ
ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ೧೨೫ನೇ ಜನ್ಮದಿನಾಚರಣೆ ನಿಮಿತ್ಯ ಅವರ ವಿಚಾರಧಾರೆಗಳ ಕುರಿತುಜುಲೈ ೨೧, ೨೨, ೨೩ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲುಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಯಲ್ಲಿ ಪಾಲ್ಗೊಂಡ ಬಳಿಕ ಸಂಸತ್ ನಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ , ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದೇನೆ. ಭೇಟಿ ವೇಳೆ ಸಚಿವಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ, ರಾಹುಲ್ ಗಾಂಧಿ ವಿದೇಶದಿಂದ ವಾಪಸಾದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ಮಾಹಿತಿ ನೀಡಿದರು.
ಹಿಂದಿ ರಾಷ್ಟ್ರೀಯ ಭಾಷೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ವೆಂಕಯ್ಯ ನಾಯ್ಡು ಅವರ ವಾದವನ್ನು ಒಪ್ಪುವುದಿಲ್ಲ, ಅನೇಕ ರಾಜ್ಯಗಳ ಜನ ಹಿಂದಿ ಮಾತನಾಡುತ್ತಾರಷ್ಟೇ. ಹಿಂದಿಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಲಾಗಿಲ್ಲ. ಜನತೆಗೆ ಅನುಕೂಲ ಕಲ್ಪಿಸಲು ತ್ರಿಭಾಷಾ ಸೂತ್ರ ಅಳವಡಿಸಬೇಕು ಎಂದು ಎಲ್ಲಾ ರಾಜ್ಯಗಳಿಗೂ ತಿಳಿಸಲಾಗಿದೆ ಎಂದರು.
Comments