ಆಗಸ್ಟ್ 5ರಂದು ಉಪರಾಷ್ಟ್ರಪತಿ ಎಲೆಕ್ಷನ್

ನವದೆಹಲಿ: ಆಗಸ್ಟ್ 5ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಹೇಳಿದ್ದಾರೆ.ಜುಲೈ 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನಾಮಪತ್ರ ವಾಪಸ್ ಪಡೆಯಲುಜುಲೈ 21 ಕೊನೆಯ ದಿನವಾಗಿದೆ. ರಾಜ್ಯಸಭೆ ಮತ್ತು ಲೋಕಸಭೆಯ ಚುನಾಯಿತ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ಇದ್ದು, ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರಷ್ಟೇ ಚುನಾವಣೆ ನಡೆಯುತ್ತದೆ.
ಕಳೆದ ಬಾರಿ ಹರಿಯಾಣದ ರಾಜ್ಯಸಭಾ ಸದಸ್ಯರ ಚುನಾವಣೆ ವೇಳೆ ಮತಪತ್ರದಲ್ಲಿ ಗುರುತು ಹಾಕಲು ಬಳಸಿದ್ದ ಮಸಿ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಚುನಾವಣೆಯಲ್ಲಿ ಮತಪತ್ರದಲ್ಲಿ ಗುರುತು ಹಾಕಲು ವಿಶೇಷ ಪೆನ್ ಗಳನ್ನೇ ಬಳಸಲಾಗುತ್ತದೆ. ಆ ಪೆನ್ ಗಳ ಹೊರತಾಗಿ ಬೇರೆ ಪೆನ್ ನಲ್ಲಿ ಮತ ಗುರುತು ಹಾಕಿದರೆ, ಅಂತಹ ಮತಪತ್ರಗಳನ್ನು ಅನರ್ಹಗೊಳಿಸಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Comments