ತೆರಿಗೆಗೆ ಕ್ಷಣಗಣನೆ,.ಇಂದು ಮಧ್ಯರಾತ್ರಿ ಜಿಎಸ್ ಟಿಗೆ ರಾಷ್ಟ್ರಪತಿಗಳಿಂದ ಚಾಲನೆ

ನವದೆಹಲಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ವ್ಯವಸ್ಥೆ ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯರಾತ್ರಿ ಒಂದು ರಾಷ್ಟ್ರ,ಒಂದು ತೆರಿಗೆ ಪರಿಕಲ್ಪನೆಗೆಚಾಲನೆ ನೀಡಲಾಗುತ್ತಿದೆ. ಶುರುವಾಗಲಿದೆ. ದೇಶದಲ್ಲಿ ಜಾರಿಗೆ ಬರುತ್ತಿರುವ ಅತಿ ದೊಡ್ಡ ತೆರಿಗೆ ಸುಧಾರಣೆ ಎಂಬ ಬಣ್ಣನೆಗೆ ಜಿಎಸ್ ಟಿ ಪಾತ್ರವಾಗಲಿದೆ.
ಸಂಸತ್ ಭವನದ ಸೆಂಟ್ರೆಲ್ ಹಾಲ್ ನಲ್ಲಿ ರಾತ್ರಿ 11 ಗಂಟೆಗೆ ನಡೆಯಲಿರುವ ವಿಶೇಶ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜಿಎಸ್ ಟಿ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಈ ವೇಳೆ ಪಿಎಂ ಮೋದಿ ಕೂಡ ಉಪಸ್ಥಿತರಿರಲಿದ್ದಾರೆ. ಪರೋಕ್ಷ ತೆರಿಗೆ, ಅಬಕಾರಿ ಸುಂಕ, ವ್ಯಾಟ್, ಅಕ್ಟ್ರಾಯ್ ಸೇರಿದಂತೆ ಇತರ ಸ್ಥಳೀಯ ತೆರಿಗೆಗಳನ್ನು ರದ್ದು ಪಡಿಸಿ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಏಕರೂಪದ ತೆರಿಗೆ ವ್ಯವಸ್ಥೆಯನ್ನು ಜಿಎಸ್ ಟಿ ಜಾರಿಗೆ ತರಲಿದೆ.
ಹೊಸ ತೆರಿಗೆ ವ್ಯವಸ್ಥೆ ಕುರಿತಂತೆ ವ್ಯಾಪಾರಿಗಳಲ್ಲಿ ಇನ್ನು ಕೆಲವು ಗೊಂದಲಗಳಿವೆ. ಸಣ್ಣ ಉದ್ದಿಮೆಗಳು ವರ್ತಕರು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸದಿರುವುದರಿಂದ ಜಿಎಸ್ ಟಿ ಯು ಕಾರ್ಯಸಾಧುವಲ್ಲ ಎಂಬುದು ಅವರ ವಾದ. ಆದ್ದರಿಂದ ಜಿಎಸ್ ಟಿಚಾಲನೆ ನೀಡುವುದಕ್ಕಾಗಿ ಶುಕ್ರವಾರ ಮಧ್ಯರಾತ್ರಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹೊಸ ತೆರಿಗೆ ಪದ್ಧತಿಯು ಭಾರತವನ್ನು ಇನ್ನಷ್ಟು ಉದ್ಯಮ ಸ್ನೇಹಿ ರಾಷ್ಟ್ರವನ್ನಾಗಿ ಮಾಡುವುದಲ್ಲದೇ , ಆರ್ಥಿಕ ಅಭಿವೃದ್ಧಿಗೂನೆರವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುತ್ತಲೇ ಬಂದಿದ್ದಾರೆ. ಇದರ ಅನ್ವಯ ತೆರಿಗೆ ಪಾವತಿಯು ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಡೆಯುವುದರಿಂದ ತೆರಿಗೆ ವಂಚನೆಗೆ ಕಡಿವಾಣ ಹಾಕಬಹುದು ಎಂಬ ವಿಶ್ವಾಸ ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
Comments