ಆಧಾರ್-ಪ್ಯಾನ್ ಲಿಂಕ್ ಮಾಡಲು ಜುಲೈ 1 ಕೊನೆ ದಿನಾಂಕವಲ್ಲ...!!

30 Jun 2017 1:01 PM | General
443 Report

ಕೇಂದ್ರ ಸರಕಾರವೂ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಿ ಎಂದು ಮಾರ್ಚ್ ತಿಂಗಳಿನಲ್ಲಿ ಕರೆ ನೀಡಿತ್ತು. ಆದರೆ ಯಾರು ಇದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಜೂನ್ 30 ಈ ಜೋಡಣೆ ಕಾರ್ಯಕ್ಕೆ ಅಂತಿಮ ದಿನ ಎನ್ನಲಾಗಿತ್ತು. ಆದರೆ ಸದ್ಯ ಈ ಗಡುವನ್ನು ವಿಸ್ತರಿಸಲಾಗಿದೆ.

ಜೂನ್ 30 ಕಡೆ ದಿನಾಂಕ ಎಂದ ಕಾರಣಕ್ಕೆ ಸಾಕಷ್ಟು ಮಂದಿ ಪ್ಯಾನ್- ಆಧಾರ್ ಲಿಂಕ್ ಮಾಡಲು ಆನ್‌ಲೈನಿನಲ್ಲಿ ಮುಗಿಬಿದ್ದ ಕಾರಣ ವೆಬ್ ತಾಣ ಜಾಮ್ ಆದ ಕಾರಣ ಅಂತಿಮ ದಿನಾಂಕವನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿದೆ. ಇದರಿಂದ ನೀವು ಪ್ಯಾನ್-ಆಧಾರ್ ಕಾರ್ಡ್ ಅನ್ನು ನಿಧಾನವಾಗಿ ಲಿಂಕ್ ಮಾಡಬಹುದಾಗಿದೆ.

ಹಂತ 1: ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ತೆರೆಯಿರಿ. incometaxindiaefiling.gov.in ಇದು ತೆರಿಗೆ ಪಾವತಿ ಮಾಡಲು ಇರುವ ವೈಬ್ ತಾಣವಾಗಿದ್ದು, ನೀವು ಇಲ್ಲಯೇ ಆಧಾರ್-PAN ಲಿಂಕ್ ಮಾಡಬಹುದಾಗಿದೆ.

ಹಂತ 2: ನೀವು ಆಧಾರ್-PAN ಲಿಂಕ್ ಮಾಡಲು ನೀವು ರಿಜಿಸ್ಟರ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕಾಗಿ ವೆಬ್ ಸೈಟಿನ ಕೆಳಭಾಗದಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆಯನ್ನು ನೀಡಲಾಗಿದೆ. ಅದನ್ನು ನೇರಾವಾಗಿ ಕ್ಲಿಕ್ ಮಾಡಿರಿ.

ಹಂತ 3: ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರದಲ್ಲಿ ಪಾನ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಮತ್ತು ಹೆಸರನ್ನು ನಮೂದಿಸಬೇಕಾಗಿದೆ. ನಂತರ ಅಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನೇ ನಮೂದಿಸಬೇಕಾಗಿದೆ.

ಹಂತ 4: ನಿಮ್ಮ ಮಾಹಿತಿಗಳನ್ನು ನೀಡಿದ ನಂತರದಲ್ಲಿ ನಿಮ್ಮ ಮಾಹಿತಿಗಳನ್ನು ಆಧಾರ್ ವೆರಿಫಿಕೇಷನ್ ಮಾಡಲಿದೆ.

ಹಂತ 5: ನಿಮ್ಮ ಆಧಾರ್ ಮತ್ತು ಪ್ಯಾನ್ ನಡುವೆ ಲಿಂಕ್ ಮಾಡಲು ಅತ್ಯವಶ್ಯಕವಾಗಿದೆ. ಎರಡು ಕಾರ್ಡ್‌ಗಳಿಗೆ ನೀಡಿರುವ ಮಾಹಿತಿಯೂ ಒಂದೇ ಆಗಿರಬೇಕಾಗಿದೆ.

ಹಂತ 6: ಇದಾದ ನಂತರ ನಿಮ್ಮ ಎರಡು ಕಾರ್ಡ್ ಗಳ ನಡುವೆ ಲಿಂಕ್ ಆಗಿದ್ದು, ಆಧಾರ್ -ಪ್ಯಾನ್ ಎರಡರಲ್ಲೂ ನೀಡಿರುವ ಮಾಹಿತಿಯೂ ಸರಿಯಿದ್ದ ಪಕ್ಷದಲ್ಲಿ, ಇಲ್ಲವಾದರೆ ಎರಡರಲ್ಲಿ ಯಾವುದರಲ್ಲದರೂ ನಿಮ್ಮ ಮಾಹಿತಿಗಳನನ್ನು ಬದಲಾಯಿಸಬೇಕಾಗಿದೆ.

Edited By

Shruthi G

Reported By

Shruthi G

Comments