ಟಿಟಿಡಿಯಿಂದ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್

29 Jun 2017 1:59 PM | General
456 Report

ತಿರುಪತಿ: ತಿಮ್ಮಪ್ಪನ ಹೆಸರು ಹೇಳುತ್ತಲೇ ಭಕ್ತರಿಗೆ ಮೊದಲು ನೆನಪಿಗೆ ಬರೋದು ಲಡ್ಡು ಪ್ರಸಾದ. ತಿರುಪತಿ ಲಡ್ಡುಗಿರೋ ಡಿಮಾಂಡ್ ಎಲ್ರಿಗೋ ಗೊತ್ತೇ ಇದೆ. ಇದೀಗ ಈ ಲಡ್ಡು ಕಾರಣದಿಂದಾಗಿ ವೆಂಕಟೇಶ್ವರನ ಭಕ್ತರಿಗೆ ಬಿಗ್ ಶಾಕ್ ಸಿಗುವ ಪರಿಸ್ಥಿತಿ ಏರ್ಪಟ್ಟಿದೆ.

ಇಷ್ಟು ದಿನ ಕಾಲ್ನಡಿಗೆ ಮೂಲಕ ತಿರುಮಲಕ್ಕೆ ಬರೋ ಭಕ್ತರಿಗೆ ಇದ್ದ ದಿವ್ಯ ದರ್ಶನವನ್ನು ಶೀಘ್ರದಲ್ಲೇ ರದ್ದು ಮಾಡಲಿದ್ದಾರೆ. ಸದ್ಯ ರಶ್ ಇರೋ ದಿನಗಳಲ್ಲಿ ಮಾತ್ರ ಅಂತಾ ಹೇಳ್ತಿದೆ ಟಿಟಿಡಿ. ಆದ್ರೆ ಮುಂದಿನ ದಿನಗಳಲ್ಲಿ ದಿವ್ಯ ದರ್ಶನವೇ ಇಲ್ಲವಾದರೂ ಅಚ್ಚರಿಯಿಲ್ಲ.

ದಿವ್ಯ ದರ್ಶನ ರದ್ದತಿಗೆ ಕಾರಣ ಲಡ್ಡು ಎಂಬುದು ಇಲ್ಲಿ ವಿಪರ್ಯಾಸ. ಕಾಲ್ನಡಿಗೆ ಮೂಲಕ ದಿವ್ಯದರ್ಶನಕ್ಕೆ ಬರೋ ಭಕ್ತರಿಗೆ ಎರಡು ಲಡ್ಡು ಉಚಿತವಾಗಿ ವಿತರಿಸಲಾಗ್ತಿದೆ. ಆದ್ರೆ ದಿನಕ್ಕೆ ಏನಿಲ್ಲ ಅಂದ್ರೂ ತಿಮ್ಮಪ್ಪನ ಹುಂಡಿಗೆ 2 ಕೋಟಿ ರೂಪಾಯಿ ಹರಕೆ ರೂಪದಲ್ಲಿ ಬಂದು ಬೀಳುತ್ತೆ. ಆದ್ರೂ ಸಹ ಆಡಳಿತ ಮಂಡಳಿ ಮಾತ್ರ 2 ಲಡ್ಡು ಉಚಿತವಾಗಿ ಕೊಡೋದ್ರಿಂದ ಭಾರೀ ನಷ್ಟ ಆಗ್ತಿದೆ ಅಂತ ಹೇಳ್ತಿದೆ.

ಕಾಲ್ನಡಿಗೆಯಲ್ಲಿ ಹೋದ್ರೂ ಸಾಮಾನ್ಯ ಸಾಲಿನಲ್ಲೇ ದರ್ಶನ: ಜುಲೈ 7 ರಿಂದ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಾಲ್ನಡಿಗೆಯಲ್ಲಿ ಬರೋ ಭಕ್ತರಿಗೆ ದಿವ್ಯ ದರ್ಶನ ಇರೋದಿಲ್ಲ ಎನ್ನಲಾಗ್ತಿದೆ. ಬದಲಿಗೆ ಸಾಮಾನ್ಯರ ದೊಡ್ಡ ಸಾಲಿನಲ್ಲೇ ಸಾಗಬೇಕಾಗಿದೆ. ರಾತ್ರಿಯೆಲ್ಲಾ ಬೆಟ್ಟ ಹತ್ತಿ ಮತ್ತೆ ಕ್ಯೂನಲ್ಲಿ ನಿಲ್ಲಬೇಕು ಅಂದ್ರೆ ಭಕ್ತರಿಗೆ ಕಷ್ಟವಾಗಲಿದೆ.

 

Edited By

Shruthi G

Reported By

Shruthi G

Comments