ಸಾಲ ಮನ್ನಾ ಖುಷಿಯಲ್ಲಿರೋ ಸಿಎಂಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ
ಬೆಂಗಳೂರು: ರೈತರ ಸಾಲ ಮನ್ನಾ ಖುಷಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ.
ರೈತರ ಉದ್ದಾರಕ್ಕಾಗಿ, ಉತ್ತಮ ರಸ್ತೆಗಳ ನಿರ್ಮಾಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಂಡಿರುವ ಸಾಲವನ್ನೇ ಸರಿಯಾಗಿಯೇ ಬಳಸಿಕೊಂಡಿಲ್ಲ ಅಂತ ಗರಂ ಆಗಿ ಪತ್ರ ಬರೆದಿದೆ.
ಮಿಲಿಯನ್ ಗಟ್ಲೆ ಸಾಲವಿದೆ. ಆದರೆ ಆ ಯೋಜನೆಗಳು ಮಾತ್ರ ಶೇ.20ರಷ್ಟು ಮುಗಿದಿಲ್ಲ. ಇನ್ನು ಆ ಯೋಜನೆಗೆ ನಿಗದಿಪಡಿಸಿರುವ ಸಮಯ ಶೇ. 60ರಷ್ಟು ಮುಗಿದಿದೆ ಅಂತಾ ಖಾರವಾಗಿ ಪತ್ರಬರೆಯಲಾಗಿದೆ.
ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯು ಕಾರ್ಯದರ್ಶಿ ಪತ್ರ ಬರೆದಿದ್ದು ಈ ಕೂಡಲೇ ಆ ವಿಳಂಬವನ್ನು ತಪ್ಪಿಸಲು ಕ್ರಮ ಕೈಗೊಳ್ಳಿ ಅಂಥ ತಾಕಿತು ಮಾಡಿದ್ದಾರೆ.
ಡ್ಯಾಂ ಪುನರ್ ವಸತಿ ಮತ್ತು ನಿರ್ವಹಣೆ ಯೋಜನೆ, ಸಮಗ್ರ ಕರ್ನಾಟಕ ಜಲಸಂಪನ್ಮೂಲ ನಿರ್ವಹಣಾ ಯೋಜನೆಗಳಲ್ಲಿ ಪ್ರಗತಿಯಾಗಿಲ್ಲ ಅಂತ ತಿಳಿಸಲಾಗಿದೆ. 2011ರಲ್ಲಿ 1357 ಮಿಲಿಯನ್ ಡಾಲರ್‍ಗಳು ಸಾಲ ಪಡೆಯಲಾಗಿದೆ.ಇದರಲ್ಲಿ ಶೇ. ಅರ್ಧದಷ್ಟು ಹಣ ಕೂಡ ಬಿಡುಗಡೆಯಾಗಿದೆ. ಆದ್ರೆ ಯೋಜನೆಗಳು ಮಾತ್ರ ಶೇ.20ರಷ್ಟು ಪ್ರಗತಿಯಾಗಿಲ್ಲ ತಿಳಿಸಿದೆ.
ರಸ್ತೆಯ ನಿರ್ಮಾಣ ಯೋಜನೆಗಳಿಗೂ ಎಡಿಬಿ, ಐಬಿಆರ್‍ಡಿ ಹಣಕಾಸು ಸಂಸ್ಥೆಗಳಿಂದ 750 ಕೋಟಿ ಸಾಲ ಪಡೆಯಲಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಅಂತ ರಾಜ್ಯ ಮುಖ್ಯಕಾರ್ಯದರ್ಶಿಗೆ ಕೇಂದ್ರ ತಾಕಿತು ಮಾಡಿದೆ.
Comments