200 ರೂ. ನೋಟು ಮುದ್ರಣಕ್ಕೆ ಆರ್ಬಿಐ ಚಾಲನೆ

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಆರ್ಬಿಐ 200 ರೂ. ನೋಟುಗಳ ಮುದ್ರಣಕ್ಕೆ ಚಾಲನೆ ನೀಡಿದೆ. ಜನರ ವ್ಯವಹಾರವನ್ನು ಸರಳಗೊಳಿಸಲು ಈ ನೋಟುಗಳನ್ನು ಮುದ್ರಿಸಲು ಈಗ ಮುಂದಾಗಿದೆ.
200 ರೂ. ನೋಟು ಮುದ್ರಣವಾಗುತ್ತಿರುವ ವಿಚಾರವನ್ನು ಆರ್‍ಬಿಐ ಅಧಿಕೃತವಾಗಿ ತಿಳಿಸಿಲ್ಲ. ಆದರೂ ಆರ್‍ಬಿಐ ಮೂಲಗಳು ಮಾಧ್ಯಮಗಳಿಗೆ ನೋಟು ಮುದ್ರಣವಾಗುತ್ತಿರುವ ಬಗ್ಗೆ ಮಾಹಿತಿ ನೀಡಿವೆ.
ಶೀಘ್ರದಲ್ಲೇ 200 ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಲಿರುವ ಏಪ್ರಿಲ್‍ನಲ್ಲಿ ವರದಿಯಾಗಿತ್ತು. ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಆರ್‍ಬಿಐ 200 ರೂ. ನೋಟು ಬಿಡುಗಡೆ ಮಾಡುವ ಸಂಬಂಧ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
2016ರ ನವೆಂಬರ್ 8ರಂದು ಹಳೇ 500 ಹಾಗೂ 1000 ರೂ. ನೋಟ್‍ಗಳನ್ನು ನಿಷೇಧಿಸಿದ್ದ ಮೋದಿ ಸರ್ಕಾರ ಹೊಸ ವಿನ್ಯಾಸದ 500 ರೂ. ಹಾಗೂ ಗುಲಾಬಿ ಬಣ್ಣದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಿತ್ತು.
Comments