ನೆದರರ್ಲ್ಯಾಂಡ್ಸ್ ಪ್ರಧಾನಿಯಿಂದ ಪಿಎಂ ಮೋದಿಗೆ ಸಿಕ್ಕ ಸ್ಪೆಷಲ್ ಗಿಫ್ಟ್ ಏನು?
ಮೂರು ದೇಶಗಳ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಇಂದು ವಾಪಸ್ ಆಗಿದ್ದು, ನೆದರ್ಲ್ಯಾಂಡ್ಸ್ ಪ್ರಧಾನಿಯಿಂದ ಪಿಎಂ ಮೋದಿ ಭರ್ಜರಿ ಗಿಫ್ಟ್ ಒಂದನ್ನು ಪಡೆದುಕೊಂಡಿದ್ದಾರೆ.
ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಪ್ರಧಾನಿ ಮೋದಿಗೆ ವಿಶೇಷ ಸೈಕಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದು, ಈ ಮೂಲಕ ಪರಿಸರ ಸಂರಕ್ಷಣೆ ಸಂದೇಶ ಸಾರಿದ್ದಾರೆ.
ಪ್ರಧಾನಿ ಮಾರ್ಕ್ ರುಟ್ಟೆ ನೀಡಿರುವ ವಿಶೇಷ ಗಿಫ್ಟ್ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಹೊಸ ಸೈಕಲ್‍ನೊಂದಿಗೆ ತೆಗೆಸಿಕೊಂಡಿರೋ ಫೋಟೋವನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಮಾರ್ಕ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ವಿಶೇಷ ತಂತ್ರಜ್ಞಾನ ಹೊಂದಿರುನ ತಿಳಿ ನೀಲಿ ಬಣ್ಣದ ಬಟಾವಸ್ ಸೈಕಲ್, ಮುಂಭಾಗದಲ್ಲಿರುವ ಎಲ್‍ಇಡಿ ದೀಪ ಹೊಂದಿದೆ. ಜೊತೆಗೆ ಇದನ್ನು ಬೆಳಗಿಸಲು ನೆರವಾಗುವಂತೆ ಡೈನಮೋ ಅಳವಡಿಸಲಾಗಿದೆ.
ಇನ್ನೊಂದು ವಿಶೇಷ ಅಂದ್ರೆ ನೆದರ್ಲ್ಯಾಂಡ್ಸ್ ನಲ್ಲಿ ಜನ ಹೆಚ್ಚಾಗಿ ಸೈಕಲ್ ಬಳಕೆ ಮಾಡುತ್ತಾರೆ. ಇದಲ್ಲದೇ ಅಲ್ಲದೇ ಪ್ರಧಾನಿ ಮಾರ್ಕ್ ಕೂಡಾ ಕಚೇರಿಗೆ ಹೋಗಲು ಸೈಕಲ್ ಬಳಸುತ್ತಾರೆ ಅಂದ್ರೆ ನಂಬಲೇಬೇಕು.
ಕೆಲವು ಅಂಕಿ ಅಂಶಗಳ ಪ್ರಕಾರ ಶೇ. 36ರಷ್ಟು ನೆದರ್ಲ್ಯಾಂಡ್ಸ್ ಜನ ಸೈಕಲ್ ಬಳಸಲು ಇಷ್ಟಪಡುತ್ತಾರೆ. ಜೊತೆಗೆ ಪರಿಸರ ಬಗ್ಗೆ ಅಲ್ಲಿನ ಜನತೆಗೆ ವಿಶೇಷ ಕಾಳಜಿ ಹೊಂದಿದ್ದು, ಪ್ರಧಾನಿ ಮೋದಿಗೆ ಸೈಕಲ್ ಗಿಫ್ಟ್ ನೀಡಿ ವಿಶ್ವದ ಗಮನಸೆಳೆದಿದೆ.
Comments