ಸೆಕ್ಯೂರಿಟಿ ಗಾರ್ಡ್, ಅಡುಗೆ ಕೆಲಸಕ್ಕೆ ಎಂಬಿಎ, ಎಂಜಿನೀಯರಿಂಗ್ ಪದವೀಧರ ಅರ್ಜಿ..!!
ಮೈಸೂರು: ಕಾರ್ಪೋರೇಟ್ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವ ಕಾರಣ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ವಿದ್ಯಾವಂತ ಯುವಕರು ಯಾವುದೇ ಸರ್ಕಾರಿ ಕೆಲಸ ಮಾಡಲು ವಿರೋಧ ವ್ಯಕ್ತಪಡಿಸದೇ ಒಪ್ಪಿಕೊಳ್ಳುತ್ತಿದ್ದಾರೆ.
ಸ್ನಾತಕೋತ್ತರ ಪದವಿ, ಎಂಜಿನೀಯರ್ಸ್ ಮತ್ತು ಎಂಬಿಎ ಪದವೀಧರರು ಸೆಕ್ಯೂರಿಟಿ ಗಾರ್ಡ್ ಮತ್ತು ಅಡುಗೆ ಕೆಲಸ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಇತ್ತೀಚೆಗೆ ಅಡುಗೆ ಸಿಬ್ಬಂದಿ, ಸಹಾಯಕರು ಮತ್ತು ಹಾಸ್ಟೆಲ್ ಗಳ ಸೆಕ್ಯೂರಿಟಿ ಗಾರ್ಡ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು, ಹೆಚ್ಚಿನ ವಿದ್ಯಾಹರ್ತೆಯುಳ್ಳ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಹಾಕಿದ್ದಾರೆ.
ಮೈಸೂರು ಜಿಲ್ಲೆಯೊಂದರಲ್ಲೇ, ಶೇ, 70ರಷ್ಟು ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಂದ ಅರ್ಜಿಗಳು ಬಂದಿವೆ, ಬಿಇ ಮತ್ತು ಎಂಬಿಎ ಪದವೀಧರರು ಕೂಡ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ.ಈ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಅವಶ್ಯಕತೆಯಿದೆ. ಈ ಹುದ್ದೆಗಳಿಗೆ 13 ರಿಂದ 15 ಸಾವಿರ ರು. ವೇತನ ಸಿಗಲಿದೆ.
Comments