ಗೂಗಲ್ ಗೆ 16 ಸಾವಿರ ಕೋಟಿ ದಂಡ
ಬ್ರೂಸೆಲ್ಸ್ : ಜಾಗತಿಕ ಪ್ರಸಿದ್ಧ ನಂ -೧ ಸರ್ಚ್ ಇಂಜಿನ್ ಸಂಸ್ಥೆಗೆ ನಂಬಿಕರ ದ್ರೋಹ ಮಾಡಿದ ಪ್ರಕರಣದಲ್ಲಿ ಯುರೋಪಿಯನ್ ಒಕ್ಕೂಟ ಸರಿಸುಮಾರು 16 ಸಾವಿರ ಕೋಟಿ ರೂ ದಂಡ ವಿಧಿಸಿದೆ. ಯುರೋಪಿಯನ್ ಗ್ರಾಹಕರಿಗೆ ಗೂಗಲ್ 2004ರಲ್ಲಿ ಶಾಪಿಂಗ್ ಮಾಡುವ ಅವಕಾಶ ವನ್ನು ಪೂಗಲ್ ಎಂಬ ಹೆಸರಿನಲ್ಲಿ ಆರಂಭಿಸಲಾಗಿತ್ತು.
ನಂತರ ಗೂಗಲ್ ಪ್ರಾಡೆಕ್ಟ್ ಸರ್ಚ್ ಹಾಗೂ ಗೂಗಲ್ ಶಾಪಿಂಗ್ ಎಂದು ಹೆಸರು ಬದಲಾಯಿಸಲಾಗಿತ್ತು. ತಾವು ನಿಯಮಬದ್ದ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿರುವ ಗೂಗಲ್ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.
ಸರ್ಚ್ ಇಂಜಿನ್ ಗೆಂದು ಪರವಾನಗಿ ಪಡೆದ ಗೂಗಲ್ ಸಂಸ್ಥೆ ಅಕ್ರಮವಾಗಿ ಶಾಪಿಂಗ್ ಸೇವೆ ಸೇರಿದಂತೆ ಬೇರೆ ಸೇವೆ ಒದಗಿಸಿದ ಹಿನ್ನಲೆಯಲ್ಲಿ ದಂಡ ವಿಧಿಸಲಾಗಿದೆ. ಈ ಸೇವೆಯನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿ90 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದ್ರೆ ಕಂಪನಿ ಸೇವೆಗಳನ್ನು ಮುಂದುವರೆಸಿದ ಕಾರಣ ದಿನನಿತ್ಯದ ಜಾಗತಿಕ ವಹಿವಾಟಿನ ಶೇ.5ರಷ್ಟು ದಂಡ ವಿಧಿಸಲು ಒಕ್ಕೂಟ ತೀರ್ಮಾನಿಸಿದೆ.
Comments