ಕೇರಳದಲ್ಲಿ ಭಾರೀ ಮಳೆ, ಭೂಕುಸಿತ
ತಿರುವನಂತಪುರಂ: ಕೇರಳದ ಹಲವು ಕಡೆಗಳಲ್ಲಿ ಸುರಿದ ಭಾರೀ ಮಳೆಗೆ ಕೆಲೆವು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ವೈನಾಡ್ ಪಾಸ್ ಬಳಿಯೂ ಭೂಕುಸಿತ ಉಂಟಾಗಿದ್ದು, ಅಪಫುಜ ಹಾಗೂ ಇಡುಕ್ಕಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ ಮೂರು ದಿನಗಳು ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಎಚ್ಚಿರಿಕೆ ನೀಡಿದೆ.
ಇಡುಕ್ಕಿಯ ಕಾಂಜಿಯಾರ್ ಹಾಗೂ ಪಂಡಿಪಾರ ಬಳಿ ಮಣ್ಣು ಕುಸಿತ ದಿಂದ ಬೆಳೆ ಮತ್ತು ಆಸ್ತಿಗೆ ಹಾನಿಯಾಗಿದೆ, ಇಡುಕ್ಕಿ ಅಣೆಕಟ್ಟಿನ ನೀರಿನ ಮಟ್ಟ ಒಂದೇ ದಿನದಲ್ಲಿ 2.5 ಅಡಿಯಷ್ಟು ಏರಿದೆ. ನೀರಿನ ಏರಿಕೆ ಹಿನ್ನಲೆಯಲ್ಲಿ ಮಾಲಂಕರ ಜಲಾಶಯದ ಗೇಟ್ ಗಳನ್ನು ತೆರೆಯಲಾಯಿತು.
Comments