ಭಾರತ-ನೆದರ್ಲೆಂಡ್ಸ್ ಒಪ್ಪಂದಕ್ಕೆ ಸಹಿ
ಆಮಸ್ಟರ್ ಡ್ಯಾಂ: ಸಾಮಾಜಿಕ ಭದ್ರತೆ ನೀರು, ಹಾಗೂ ಸಾಂಸ್ಕೃತಿಕ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ - ನೆದರ್ಲೆಂಡ್ ಮೂರು ಒಪ್ಪಂದಗಳಿಗೆ ಸಹಿ ಹಾಕಿದೆ. ಮಂಗಳವಾರ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಮತ್ತು ನೆದರ್ಲೆಂಡ್ಸ್ ಪ್ರಧಾನಿ ಮಾರ್ಕ್ ರುಟ್ ಒಪ್ಪಂದಗಳಿಗೆ ಸಹಿ ಹಾಕಿದರು.
ಉಭಯ ನಾಯಕರ ಜತೆಗೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ, ಹವಾಮಾನ ಬದಲಾವಣೆ ಒಪ್ಪಂದಕ್ಕೆ ಬದ್ಧತೆ ಮತ್ತು ಮರುಬಳಕೆ ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮುಂದುವರಿಸುವ ನಿರ್ಧಾರಕ್ಕೆ ಬರಲಾಯಿತು. ಭಾರತದ ಆರ್ಥಿಕತೆ ಬೆಳವಣಿಗೆಯಲ್ಲಿ ನೆದರ್ಲೆಂಡ್ಸ್ ಮಹತ್ವದ ಪಾಲು ಇದೆ ಎಂದು ಮೋದಿ ಇದೇ ವೇಳೆ ಹೇಳಿದರು. ನೆದರ್ಲೆಂಡ್ಸ್ ಜತೆ ದ್ವಿಪಕ್ಷೀಯ ಸಂಬಂಧ ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಮೋದಿ ಆಶಿಸಿದರು.
ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ,, ವಿಶ್ವದ ಮೂಲೆ ಮೂಲೆಯಲ್ಲಿ ಪಸರಿಸಿರುವ ಅನಿವಾಸಿ ಭಾರತೀಯರು ಭಾರತದ ಪ್ರತಿನಿಧಿಗಳಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ನೂರಾರು ವರ್ಷಗಳ ಹಿಂದೆ ಭಾರತ ತೊರೆದರು ಭಾರತೀಯತೆ ಉಳಿಸಿಕೊಂಡಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.
Comments