ಇಫ್ತಿಯಾರ್ ಕೂಟ : ಪೇಜಾವರ ಶ್ರೀಗಳದ್ದು ಯಾವುದೇ ತಪ್ಪಿಲ್ಲ
ಬೆಂಗಳೂರು: ಉಡುಪಿ ಪೇಜಾವರ ಶ್ರೀಗಳು ಇಫ್ತಿಯಾರ್ ಕೂಟ ಆಯೋಜನೆ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಅವರ ನಡೆ ಸ್ವಾಗತಾರ್ಹವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ದೇಶದ ಸಂಸ್ಕಾರ, ಸಂಸ್ಕೃತಿ ಹಿನ್ನಲೆಯಲ್ಲಿ ನಾವು ಗೋಮಾಂಸ ನಿಷೇಧಿಸಿದ್ದೇವೆ. ಯಾರ ಆಹಾರ ಪದ್ಧತಿ ಮೇಲೂ ನಮ್ಮ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ, ಇದು ಉತ್ತಮ ಸಂಪ್ರದಾಯವಲ್ಲ, ರಾಜ್ಯ ಸರ್ಕಾರವೇ ಇಂತಹ ಕೆಲಸಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂದರು.
ಕೆಂಪೇಗೌಡ ದಿನಾಚರಣೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿರುವ ಅವರು ಸ್ವಾಮೀಜಿಗಳು ಭಾವನಾತ್ಮಕ ವಿಚಾರದಲ್ಲಿ ಆಚರಣೆ ಮಾಡಿದ್ದಾರೆ. ರಂಜಾನ್ ಆಚರಣೆ ತಪ್ಪಲ್ಲ, ಒಂದು ವೇಳೆ ನಮಾಜ್ ಹಾಗೂ ಬೇರೆ ಏನೇ ಮಾಡಿದ್ದರು ತಪ್ಪು, ರಂಜಾನ್ ಗಾಗಿ ರಾಜಕಾರಿಣಿಗಳು ಟೋಪಿ ಹಾಕಿ ಪೋಸ್ ಕೊಡ್ತೀವಿ, ಆದರೆ ಸ್ವಾಮೀಜಿಗಳು ಮಾಡಿದ್ದು ಶೋ ಅಲ್ಲ, ಅವರು ಪೋಸ್ ಕೊಟ್ಟಿಲ್ಲಯ ಸರ್ವಧರ್ಮ ಸಮನ್ವಯ ಭಾವನೆಯಲ್ಲಿ ಇಫ್ತಿಯಾರ್ ಆಯೋಜಿಸಿದ್ದರು ಎಂದರು.
Comments