ರವಿ ಬೆಳೆಗೆರೆ ಶಿಕ್ಷೆ,. ನಿರ್ಣಯ ಸ್ಪೀಕರ್ ವಾಪಸ್ ಪಡೆಯಲಿ
ಹುಬ್ಬಳ್ಳಿ: ಕಾರ್ಯಾಂಗ, ನ್ಯಾಯಾಂಗದ ಜತೆ ಮಾಧ್ಯಮ ಜತೆಗೆ ಶಾಸಕಾಂಗ ಸೌಹಾರ್ದ ಕಾಪಾಡಿಕೊಳ್ಳಬೇಕು. ಪತ್ರಕರ್ತ ರವಿ ಬೆಳೆಗೆರೆಯವರಿಗೆ ಶಿಕ್ಷೆ ವಿಧಿಸುವ ವಿಧಾನಸಭೆ ಹಕ್ಕುಬಾಧ್ಯತಾ ಸಮಿತಿ ನಿರ್ಣಯವನ್ನು ಸ್ಪೀಕರ್ ಪುನರ್ ಪರಿಶೀಲಿಸಿ ವಾಪಸ್ ತೆಗೆದುಕೊಳ್ಳಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸದನದ ಕೊನೆಯ ದಿನ ಸ್ಪೀಕರ್ ಈ ನಿರ್ಣಯ ಕೈಗೊಂಡಿದ್ದರು. ಕಿಮ್ಮನೆ ರತ್ನಾಕರ್ ನೇತೃತ್ವದ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಆದರೆ ರವಿ ಬೆಳೆಗೆರೆ ಅವರ ವಿಷಯ ಅಜೆಂಡಾದಲ್ಲಿ ಇರಲಿಲ್ಲ. ನಾನು ಹೊರಗೆ ಬಂದ ನಂತರ ಈ ನಿರ್ಣಯ ಹೊರಬಿದ್ದಿದೆ. ರವಿ ಬೆಳೆಗೆರೆಗೆ ಶಿಕ್ಷೆ ವಿಧಿಸಿದ ನಿರ್ಣಯ ಕೇಳಿ ನನಗೂ ಆಶ್ಚರ್ಯವಾಯಿತು ಎಂದು ಶೆಟ್ಟರ್ ಹೇಳಿದರು.
Comments