ಟ್ವಿಟರ್ ಖಾತೆ ತೆರೆದ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್

27 Jun 2017 3:56 PM | General
855 Report

ನವದೆಹಲಿ: ರಾಜಕಾರಿಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗುತ್ತಿರುವ ಟ್ರೆಂಡ್ ಹೆಚ್ಚಿದೆ. ಇದೀಗ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮೀರಾಕುಮಾರ್ ಸೇರಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಗೆ ಆಯ್ಕೆಯಾಗಿರುವ ಮೀರಾ ಕುಮಾರ್ ಸೋಷಿಯಲ್ ಮೀಡಿಯಾ ಟ್ವಿಟರ್ ಖಾತೆ ತೆರೆದಿದ್ದಾರೆ. ಮೀರಾ ಕುಮಾರ್ ಇವತ್ತು ತಮ್ಮ ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಇದುವೆರಗೂ ಅವರು ಟ್ವಿಟರ್ ನಲ್ಲಿ ಮೂರು ಟ್ವೀಟ್ ಗಳನ್ನು ಮಾಡಿದ್ದಾರೆ. ಜನರನ್ನು ಉದ್ದೇಶಿಸಿ ಮತ್ತೊಂದು ಟ್ವಿಟ್ ಮಾಡಿರುವ ಅವರು, ರಾಷ್ಟ್ರಪತಿ ಚುನಾವಣೆ ಬಗ್ಗೆ ತಿಳಿಯಲು ತಮ್ಮ ಫೇಸ್ ಬುಕ್ ಅಕೌಂಟ್ ನ್ನು ಫಾಲೋ ಮಾಡುವಂತೆ ಜನರಿಗೆ ತಿಳಿಸಿದ್ದಾರೆ.

ಟ್ವಿಟರ್ ನಲ್ಲಿ ದೇಶದ ಹಲವು ಸಚಿವರು, ಗಣ್ಯರು ಸಕ್ರೀಯರಾಗಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಅನ್ನು ಪ್ರಧಾನಮಂತ್ರಿ ಮೋದಿ ಪಡೆದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಟ್ವಿಟರ್ ನಲ್ಲಿ ಫಾಲೋ ಮಾಡುವವರ ಸಂಖ್ಯೆ 3. 1 ಕೋಟಿ ಇದೆ.

Edited By

venki swamy

Reported By

Sudha Ujja

Comments