ಗ್ರಾಹಕರಿಗೆ ಭರ್ಜರಿ ಕೊಡುಗೆ: ರೂ.999ಕ್ಕೆ ಲ್ಯಾಪ್ಟಾಪ್..!!

ಭಾರತದ ಅತೀ ದೊಡ್ಡ ಆನ್ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಸದ್ಯ ದೇಶದ ಮಾರುಕಟ್ಟೆಯಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವ ಇಂಟೆಲ್, HP, ಮೈಕ್ರೋಸಾಫ್ಟ್ ಜೊತೆಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಸ್ಮಾರ್ಟ್ಫೋನ್ ಏಕ್ಸ್ಕ್ಲೂಸಿವ್ ಮಾದರಿಯಲ್ಲಿ ಲ್ಯಾಪ್ ಟಾಪ್ ಅನ್ನು ಮಾರಾಟ ಮಾಡಲು ಮುಂದಾಗಿದೆ.
ಇಂಟೆಲ್ ಕೋರ್ i3 ಪ್ರೋಸೆಸರ್ ವಿಂಡೋಸ್ 10 ಹೊಂದಿರುವ HP ಲ್ಯಾಪ್ ಟಾಪ್ ಅನ್ನು ಮಾರಾಟ ಮಾಡಲಿದ್ದು, ಇದರ ಬೆಲೆ ರೂ.36,000 ರೂಗಳಾಗಿದೆ. ಅದರೆ ಇದನ್ನು ಪ್ರತಿ ತಿಂಗಳು ರೂ.999 ನೀಡಿ ಖರೀದಿಸುವ ಅವಕಾಶವನ್ನು ಫ್ಲಿಪ್ ಕಾರ್ಟ್ ಮಾಡಿಕೊಡಲು ಮುಂದಾಗಿದೆ.
ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ EMI: ಫ್ಲಿಪ್ ಕಾರ್ಟ್ ಇದೇ ಮೊದಲ ಬಾರಿಗೆ ಆನ್‌ಲೈನ್ ಶಾಪಿಂಗ್ ತಾಣಗಳ ಇತಿಹಾಸದಲ್ಲೇ 36 ತಿಂಗಳ EMI ಆಯ್ಕೆಯನ್ನು ನೀಡಿದ್ದು, ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ನೀಡಿದೆ. ಅದರಲ್ಲೂ ಕಡಿಮೆ ಬೆಲೆಗೆ ಗ್ರಾಹಕರು ಅತ್ಯತ್ತಮ ಲ್ಯಾಪ್ ಟಾಪ್ ಅನ್ನೇ ಖರೀಸಬಹುದಾಗಿದೆ.
ವಿದ್ಯಾರ್ಥಿಗಳಿಗೆ ಸಹಾಯಕಾರಿ: ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಈ ಆಫರ್ ನೀಡಿದ್ದು, ಇದಕ್ಕಾಗಿ ICICI ಮತ್ತು ಸಿಟಿ ಬ್ಯಾಂಕ್ ನೊಂದಿಗೆ ಕೂಡಿಕೊಂಡಿದೆ. ಈ ಬ್ಯಾಂಕ್ ಗಳ ಮೂಲಕ EMI ನೀಡುತ್ತಿದೆ.
Comments