GST ಯಿಂದ ಯಾವ ತೆರಿಗೆಯೂ ಜಾಸ್ತಿಯಾಗದು
ಜಿಎಸ್ ಟಿ ಯಿಂದಾಗಿ ವಸ್ತುಗಳ ಮೇಲಿನ ತೆರಿಗೆ ದರ ಹೆಚ್ಚಾಗಲಿದೆ ಎಂಬ ಆತಂಕ ಬೇಡ, ಯಾವುದೇ ವಸ್ತುವಿನ ಮೇಲಿನ ತೆರಿಗೆ ಸದ್ಯದ ದರಕ್ಕಿಂತ ಹೆಚ್ಚಾಗುವುದಿಲ್ಲ
ಬೆಂಗಳೂರು: ದೇಶದೆಲ್ಲೆಡೆ ಜಾರಿಯಾಗುತ್ತಿರುವ ಜಿಎಸ್ ಟಿ ಯಿಂದಾಗಿ ವಸ್ತುಗಳ ಮೇಲಿನ ತೆರಿಗೆ ದರ ಹೆಚ್ಚಾಗಲಿದೆ ಎಂಬ ಆತಂಕ ಬೇಡ, ಯಾವುದೇ ವಸ್ತುವಿನ ಮೇಲಿನ ತೆರಿಗೆ ಸದ್ಯದ ದರಕ್ಕಿಂತ ಹೆಚ್ಚಾಗುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಭಾನುವಾರ ಸಮನ್ವಯ ಸಂಸ್ಠೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರುವ ಅವರು, ಜಿಎಸ್ ಟಿ ಯಿಂದ ದರಗಳು ಕಡಿಮೆಯಾಗಲಿವೆ. ದೇಶವು ಒಂದೇ ಮಾರುಕಟ್ಟೆಯಾಗಬೇಕಾದರೆ ಭಯ ಮುಕ್ತ ವಾತಾವರಣ ಇರಬೇಕು, ಯಾವುದೇ ವಸ್ತುವಿನ ತೆರಿಗೆ ದರವು ಅಧಿಕವಾಗುವುದಿಲ್ಲ. ಜಿಎಸ್ ಟಿ ಯಥಾಸ್ಠಿತಿ ಕಾಯ್ದುಕೊಳ್ಳಬೇಕು ಇಲ್ಲವೇ ಕಡಿಮೆ ದರ ವಿಧಿಸಬೇಕು , ಉತ್ಪನ್ನಕ್ಕೆ ಲಭ್ಯವಾಗುವ ಇನ್ ಪುಟ್ ಸಬ್ಸಿಡಿಯ ಲಾಭದ ಬಗ್ಗೆ ಚರ್ಚೆಗಳು ನಡೆಸಬೇಕು ಎಂದು ಹೇಳಿದರು.
ಜು.೧ರಿಂದ ಜಿಎಸ್ ಟಿ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಜೂ.೩೦ರಂದು ಮಧ್ಯರಾತ್ರಿ ಆರ್ಥಿಕ ಸ್ವಾತಂತ್ರ್ಯ ಆಚರಣೆ ಮಾಡಬೇಕಿದೆ. ಈ ಸಂಬಂಧ ಜಂಟಿ ಅಧಿವೇಶನ ಕೂಡ ಜರುಗಲಿದೆ ಎಂದರು.
Comments