ಇಂದು ರಂಜಾನ್ ಹಬ್ಬದ ಸಂಭ್ರಮ
ಬೆಂಗಳೂರು: ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಮುಸ್ಲಿಂ ಭಾಂಧವರು ನಗರದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಈ ಹಬ್ಬದ ವಿಶೇಷ. ಹಲವು ಮುಸ್ತಿಂ ಭಾಂಧವರು ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುವುದು ಸಾಮಾನ್ಯವಾಗಿರುತ್ತದೆ.
ರಂಜಾನ್ ಹಬ್ಬದ ತಯಾರಿ ಜೋರಾಗಿತ್ತು ನಿನ್ನೆ ತಡರಾತ್ರಿಯವರೆಗೂ ಮುಸ್ಲಿಂ ಬಾಂಧವರು ಹಬ್ಬದ ಪ್ರಯುಕ್ತ ಖರೀದಿಯಲ್ಲಿ ತೊಡಗಿದ್ದರು. ಕೆಲೆವೆಡೆ ನಿನ್ನೆಯೇ ರಂಜಾನ್ ಹಬ್ಬವನ್ನುಆಚರಿಸಲಾಯ್ತು. ನಗರದ ಹಲವು ಮಸೀದಿಗಳು ದೀಪಲಂಕಾರದಿಂದ ಕಂಗೊಳಿಸುತ್ತಾ ಇದ್ದವು. ಇಂದು ಸಹ ಸಹಸ್ರಾರು ಮುಸ್ಲಿಂ ಭಾಂಧವರು ಪ್ರಾರ್ಥನೆ ಸಲ್ಲಿಸಲಿದ್ದಾರೆ.
ನಿನ್ನೆ ಚಂದ್ರ ದರ್ಶನವಾದ ಕಾರಣ ಕರಾವಳಿ ಭಾಗದಲ್ಲಿ ನಿನ್ನೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಿಸಿ ಪರಸ್ಪರ ಶುಭಾಷಯ ಕೋರಿದರು.
Comments