ಎಲ್ಲೆಡೆ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ..
ಬೆಂಗಳೂರು: ಮುಂಗಾರು ಹಂಗಾಮಿನ ಮೊದಲ ಹಬ್ಬ ಮಣ್ಣೆತ್ತಿನ ಅಮವಾಸ್ಯೆಯ ಸಂಭ್ರಮ ರಾಜ್ಯಾದ್ಯಂತ ಇಂದು ಮನೆ ಮಾಡಿದೆ. ರೈತರು ಉತ್ತಮ ಬೆಳೆಗಾಗಿ ಮಣ್ಣೆತ್ತಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಎತ್ತು ಮತ್ತು ಮಣ್ಣನ್ನು ಪೂಜಿಸಿದರೆ ಮಳೆ -ಬೆಳೆ ಚೆನ್ನಾಗಿ ನಡೆದು , ಸಮೃದ್ಧಿ ಫಸಲು ಪಡೆಯುತ್ತೇವೆ ಎಂಬ ನಂಬಿಕೆ ಜನರಲ್ಲಿದೆ.
ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಎತ್ತುಗಳಿಗೆ ಭಾರೀ ಬೇಡಿಕೆ ಇದೆ. ಮಣ್ಣೆತ್ತಿನ ಅಮವಾಸ್ಯೆ ದಿನವಾದ ಇಂದು ಮನೆ ಮನೆಗಳಲ್ಲಿ ಮಣ್ಣಿನ ಎತ್ತುಗಳ ಜೋಡಿಯನ್ನು ಮಾಡುವುದರ ಮೂಲಕ ಹಬ್ಬವನ್ನು ಆಚರಿಸಲಾಗುತ್ತಿದೆ. ಮಕ್ಕಳು ಶಾಲೆ ಮರೆತು ಮಣ್ಣನ್ನು ಕಲೆಸಿ ಅದರಿಂದ ಎತ್ತುಗಳನ್ನು ಮಾಡಿ ಅವುಗಳನ್ನು ಸಿಂಗರಿಸಿ ಪೂಜೆಗೆ ಸನ್ನದ್ಧ ಮಾ಼ಡುತ್ತಾರೆ. ಸುಗ್ಗಿಯ ಕಾಲದವರೆಗೂ ಜೊತೆಯಾಗಿ ಇರುವ ಎತ್ತುಗಳನ್ನು ರೈತರು ಇಂದಿನ ದಿನ ಪೂಜಿಸುತ್ತಾರೆ.
Comments